ಮಧ್ಯಾವಧಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ರಾಮಸೇತು ವಿಷಯದ ಬಗ್ಗೆ ಆಕ್ರಮಣಕಾರಿ ಮನೋಭಾವವನ್ನು ಶುಕ್ರವಾರ ಪ್ರದರ್ಶಿಸಿತು. ಭಗವಾನ್ ರಾಮನ ಬಗ್ಗೆ ಧರ್ಮನಿಂದನೆಯ ಹೇಳಿಕೆ ಹಿಂತೆಗೆದುಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿಫಲರಾದರೆ ಕೇಂದ್ರ ಸರ್ಕಾರದಲ್ಲಿರುವ ಡಿಎಂಕೆಯ ಎಲ್ಲ ಸಚಿವರನ್ನು ತಕ್ಷಣವೇ ವಜಾ ಮಾಡಬೇಕೆಂದು ಬಿಜೆಪಿ ಒತ್ತಾಯಿಸಿತು.
ಮಾಜಿ ಪ್ರಧಾನಿ ವಾಜಪೇಯಿ ಅನಾರೋಗ್ಯದ ಕಾರಣದಿಂದ ಸಭೆಯಲ್ಲಿ ಹಾಜರಿರಲಿಲ್ಲ. ಅವರ ಗೈರುಹಾಜರಿಯಲ್ಲಿ ನಾಯಕತ್ವದ ವಿಷಯ ಪ್ರಸ್ತಾಪವಾದರೂ ಸ್ಪಷ್ಟ ಉತ್ತರವನ್ನು ಬಿಜೆಪಿ ಕಂಡುಕೊಂಡಿಲ್ಲ.
ಸುಮಾರು 11 ವರ್ಷಗಳ ಹಿಂದೆ ರಾಮ ಮಂದಿರದ ಅಲೆಯ ಬೆಂಬಲದ ಮೇಲೆ ಮೊದಲಬಾರಿಗೆ ಅಧಿಕಾರ ಗದ್ದುಗೆಗೆ ಏರಿದ್ದ ಪಕ್ಷವು, ರಾಮಸೇತು ಪ್ರಕರಣದಲ್ಲಿ ಪ್ರಮಾಣಪತ್ರಗಳು ಸರ್ಕಾರದ ಹಿಂದು ವಿರೋಧಿ ಮನಸ್ಥಿತಿಗೆ ದ್ಯೋತಕವಾಗಿದೆ ಎಂದು ಹೇಳಿದೆ.
ಸಾಚಾರ್ ಸಮಿತಿ ವರದಿಯನ್ನು ಕೋಮು ವಿಭಜನೆಯ ಬೀಜ ಬಿತ್ತುವ ಯತ್ನ ಎಂದು ಬಿಜೆಪಿ ತಳ್ಳಿಹಾಕಿದೆ.ಇಲ್ಲಿ ಸೇರಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ರಾಜನಾಥ್ ಸಿಂಗ್ , ಎನ್‌ಡಿಎ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪಕ್ಷದ ಬದ್ಧತೆಯನ್ನು ಪ್ರಕಟಿಸಿದರು.
|