ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮಸೇತು:ಇಂದು ವಿಶೇಷ ಚರ್ಚೆ
ರಾಮಸೇತು ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಗಳಿಸುವ ಸಲುವಾಗಿ ವ್ಯೂಹ ರೂಪಿಸಲು,ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯು ಶನಿವಾರ ವಿಶೇಷ ಚರ್ಚೆಯನ್ನು ನಡೆಸಲು ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಮ ಸೇತು ಬಗ್ಗೆ ಬೆಳಗಿನ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ. ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಸ್ಥಳದಲ್ಲಿ ಬಿಜೆಪಿ ಭಗವಾನ್ ರಾಮನ ಮಾನವ ಗಾತ್ರದ ಚಿತ್ರವನ್ನು ಮತ್ತು ಪಕ್ಷದ ಕೇಂದ್ರಕಚೇರಿಯಲ್ಲಿ ರಾಮ ಪಥ ಪ್ರದರ್ಶನವನ್ನೂ ಏರ್ಪಡಿಸಿದೆ.

ಭಗವಾನ್ ರಾಮನ ಕುರಿತು ದರ್ಮನಿಂದನೆಯ ಹೇಳಿಕೆ ನೀಡಿದ ಮುಖ್ಯಮಂತ್ರಿ ಕರುಣಾನಿಧಿ ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳದಿದ್ದರೆ, ಕೇಂದ್ರದ ಎಲ್ಲ ಡಿಎಂಕೆ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಶುಕ್ರವಾರ ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಲಾಯಿತು.
ಮತ್ತಷ್ಟು
ಕೇಂದ್ರದ ಡಿಎಂಕೆ ಸಚಿವರ ವಜಾಗೆ ಒತ್ತಾಯ
ನಾಲ್ವರು ಪತ್ರಕರ್ತರಿಗೆ ಜೈಲು ಶಿಕ್ಷೆ
ಅಜ್ಞಾತ ವ್ಯಕ್ತಿಗಳ ದಾಳಿ: ಕೈದಿ ಸಾವು
ವಾಯುಭಾರ ಕುಸಿತದಿಂದ ಭಾರೀ ಮಳೆ
ಭೂಮಿ ರಕ್ಷಣೆಯ ಮಹತ್ವ ಅರಿತಿದ್ದ ಗಾಂಧಿ
ಸಬರ್‌ವಾಲ್ ವಿರುದ್ಧ ಲೇಖನಕ್ಕೆ ಸಜೆ