ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣುಶಕ್ತಿಗೋಸ್ಕರ ಪರಮಾಣು ಒಪ್ಪಂದ: ಬಸು
ಪರಮಾಣು ಒಪ್ಪಂದದ ಪರವಾಗಿ ಪಶ್ಚಿಮಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ವಾದ ಮಂಡಿಸಿದ ಬಳಿಕ ಸಿಪಿಐನ ಹಿರಿಯ ನಾಯಕ ಜ್ಯೋತಿ ಬಸು ಕೂಡ ಬುದ್ಧದೇವ್ ಮಾತಿಗೆ ಪ್ರತಿಧ್ವನಿಸಿದ್ದಾರೆ.

ಅಣು ಶಕ್ತಿಗೋಸ್ಕರ ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಬಸು ಶುಕ್ರವಾರ ಹೇಳಿದರು. ಹೊಸ ಕೈಗಾರಿಕೆಗಳು ಸ್ಥಾಪಿತವಾಗುತ್ತಿದ್ದು, ಇಂಧನದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಮಾಣು ಸ್ಥಾವರಗಳ ಅಗತ್ಯ ಕಂಡುಬಂದಿದೆ ಎಂದು ಅವರು ಹೇಳಿದರು. ಪಕ್ಷದ ಕಾರ್ಯಾಲಯದ ಸಭೆಯ ಬಳಿಕ ಅವರು ವರದಿಗಾರರ ಜತೆ ಮಾತನಾಡುತ್ತಿದ್ದರು.

ಸಿಪಿಎಂ ಪಾಲಿಟ್‌ಬ್ಯೂರೊ ಮತ್ತು ಕೇಂದ್ರ ಸಮಿತಿ ಸಭೆಗಳ ಬಳಿಕ ಎಡಪಕ್ಷಗಳು ಮತ್ತು ಯುಪಿಎ ಸರ್ಕಾರದ ನಡುವಿನ ಸಂಘರ್ಷ ಶಮನಗೊಳ್ಳುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಬದ್ಧತೆ ಇಲ್ಲದಿರುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸಿವೆ ಎಂದು ಅವರು ಹೇಳಿದರು.

ತಾವು ದೇಶೀಯ ಅಥವಾ ವಿದೇಶಿ ಸ್ಥಾವರ ಬಯಸುತ್ತೀರಾ ಎಂಬ ಪ್ರಶ್ನೆಗೆ, ಯಾವ ತಂತ್ರಜ್ಞಾನ ಸೂಕ್ತವೆಂದು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ್‌ನಲ್ಲಿ ಪರಮಾಣು ಇಂಧನ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆ ಇತ್ತು.

ಆದರೆ ಪರಮಾಣು ಇಂಧನ ಸ್ಥಾವರಗಳನ್ನು ಕಲ್ಲಿದ್ದಲು ದೊರೆಯುವ ಸ್ಥಳಗಳಲ್ಲಿ ಸ್ಥಾಪಿಸಬಾರದೆಂದು ಕೇಂದ್ರ ಸರ್ಕಾರ ತಿಳಿಸಿತು ಎಂದು ಬಸು ಹೇಳಿದರು.
ಮತ್ತಷ್ಟು
ರಾಮಸೇತು:ಇಂದು ವಿಶೇಷ ಚರ್ಚೆ
ಕೇಂದ್ರದ ಡಿಎಂಕೆ ಸಚಿವರ ವಜಾಗೆ ಒತ್ತಾಯ
ನಾಲ್ವರು ಪತ್ರಕರ್ತರಿಗೆ ಜೈಲು ಶಿಕ್ಷೆ
ಅಜ್ಞಾತ ವ್ಯಕ್ತಿಗಳ ದಾಳಿ: ಕೈದಿ ಸಾವು
ವಾಯುಭಾರ ಕುಸಿತದಿಂದ ಭಾರೀ ಮಳೆ
ಭೂಮಿ ರಕ್ಷಣೆಯ ಮಹತ್ವ ಅರಿತಿದ್ದ ಗಾಂಧಿ