ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸುನಿತಾ ವಿಲಿಯಮ್ಸ್‌ಗೆ ಪಟೇಲ್ ಪ್ರಶಸ್ತಿ
ಭಾರತೀಯ ಮೂಲದ ಅಮೆರಿಕದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ ಅವರಿಗೆ ವಿಶ್ವ ಗುಜರಾತಿ ಸಮಾಜ ಶುಕ್ರವಾರ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಗುಜರಾತಿನ ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಈ ಪ್ರಶಸ್ತಿಯನ್ನು ಸುನಿತಾಗೆ ನೀಡಿದರು.

ಈ ಪ್ರಶಸ್ತಿಯು 250,000 ರೂ. ನಗದು ಹಣವನ್ನು ಒಳಗೊಂಡಿದ್ದು, ಸುನಿತಾ ತಂದೆ ದೀಪಿಕಾ ಪಾಂಡ್ಯ ಅದನ್ನು ಸ್ವೀಕರಿಸಿದ ತರುವಾಯ ಧರ್ಮದತ್ತಿ ಸಂಸ್ಥೆಗೆ ನೀಡುವುದಾಗಿ ಘೋಷಿಸಿದರು.

ಈ ತತ್ವವು ನನ್ನ ವೃತ್ತಿಯುದ್ದಕ್ಕೂ ಮಾರ್ಗದರ್ಶನ ಮಾಡಿದೆ. ನನಗೆ ಮಿತಿಗಳಿವೆ ಎಂದು ನಾನು ಭಾವಿಸಿಯೋ ಇಲ್ಲ. ಗಡಿಗಳಿಗೆ ನಿಜವಾಗಲೂ ಮಿತಿಯೆನ್ನುವುದು ಇಲ್ಲ. ಅವು ಮುಖ್ಯವಾಗಿ ನಿಮ್ಮ ಮನಸ್ಸಿನಲ್ಲಿರುತ್ತದೆ. ಈ ಸಂದೇಶವು ಎಲ್ಲ ಯುವಜನರ ಮನಸ್ಸಿಗೂ ತಟ್ಟುತ್ತದೆಂದು ಆಶಿಸುವುದಾಗಿ ಅವರು ಹೇಳಿದರು.

ತನ್ನ ತಂದೆಯ ಪೂರ್ವಿಕರ ಗ್ರಾಮ ಜುಲಾಸನ್‌ನಲ್ಲಿ ಶಾಲಾ ಮಕ್ಕಳ ಜತೆ ಸುನಿತಾ ಸಂವಾದಿಸಿದರು. ತನ್ನ ಅನುಭವಗಳನ್ನು ಹಂಚಿಕೊಂಡ ಅವರು, ಕೃತಕ ಅಡ್ಡಿಗಳನ್ನು ದಾಟಿ ಮಾನವತೆಯನ್ನು ರಕ್ಷಿಸಬೇಕೆಂದು ಕರೆ ನೀಡಿದರು.

ನಾವು ಭೂಪಟದಲ್ಲಿ ನೋಡುವ ಗಡಿಗಳು ವಾಸ್ತವವಲ್ಲ. ನಮಗೆ ಇರುವುದು ಒಂದೇ ವಿಶ್ವ. ಅಲ್ಲಿರುವ ಎಲ್ಲರೂ ಒಂದೇ. ಇದನ್ನು ನೀವು ಜೀವನವಿಡೀ ಪಾಲಿಸಿ. ಎಲ್ಲ ಮಾನವತೆಗೂ ನಿಮ್ಮ ಸಹನೆ ಅತ್ಯುಚ್ಛವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಮತ್ತಷ್ಟು
ಪ್ರಣವ್ ಮುಖರ್ಜಿ ಅಮೆರಿಕಕ್ಕೆ ಪ್ರವಾಸ
ಅಣುಶಕ್ತಿಗೋಸ್ಕರ ಪರಮಾಣು ಒಪ್ಪಂದ: ಬಸು
ರಾಮಸೇತು:ಇಂದು ವಿಶೇಷ ಚರ್ಚೆ
ಕೇಂದ್ರದ ಡಿಎಂಕೆ ಸಚಿವರ ವಜಾಗೆ ಒತ್ತಾಯ
ನಾಲ್ವರು ಪತ್ರಕರ್ತರಿಗೆ ಜೈಲು ಶಿಕ್ಷೆ
ಅಜ್ಞಾತ ವ್ಯಕ್ತಿಗಳ ದಾಳಿ: ಕೈದಿ ಸಾವು