ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಾಂಟಾಕ್ಟ್ ಲೆನ್ಸ್ ಬಳಕೆಗೆ ಸಲಹೆ
ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಗಳಲ್ಲಿ ಬಳಕೆಯಾಗುವ ಕೃತಕ ಬಣ್ಣಗಳಿಂದ ಮತ್ತು ಗುಲಾಲ್‌ಗಳಿಂದ ಕಣ್ಣುಗಳಿಗೆ ಹಾನಿಯನ್ನು ತಪ್ಪಿಸಲು ಬಳಸಿಬಿಸಾಡುವ ಕಾಂಟಾಕ್ಟ್ ಲೆನ್ಸ್‌ಗಳನ್ನು ಉಪಯೋಗಿಸುವಂತೆ ನೇತ್ರತಜ್ಞರು ಸಲಹೆ ಮಾಡಿದ್ದಾರೆ.

ಹಿಂದಿನ ಗಿಡಿಮೂಲಿಕೆ ಬಣ್ಣಗಳು ಔಷಧಿ ಗುಣಗಳಿಂದ ಕೂಡಿದ್ದು, ಚರ್ಮ ಮತ್ತು ಆರೋಗ್ಯಕ್ಕೆ ಪ್ರಶಸ್ತವಾಗಿದೆ. ಆದರೆ ಈಗ ಕೃತಕ ಬಣ್ಣಗಳು ಅವುಗಳ ಬದಲಾಗಿ ಬಂದಿವೆ. ಇಂದು ಬಳಕೆಯಾಗುವ ಅನೇಕ ಬಣ್ಣಗಳು ಆಕ್ಸಿಡೈಸ್ಡ್ ಲೋಹಗಳು ಮತ್ತು ಕೈಗಾರಿಕೆಯಲ್ಲಿ ಬಳಸುವ ಬಣ್ಣಗಳು.

ಇವು ಮಾನವನ ಮೇಲೆ ಪ್ರಯೋಗಿಸಲು ಅರ್ಹವಲ್ಲ ಎಂದು ಡಾ.ಮೆಹ್ತಾ ಹೇಳಿದರು. ಈ ಸಿಂಥೆಟಿಕ್ ಬಣ್ಣಗಳು ಅತ್ಯಂತ ವಿಷಕಾರಿಯಾಗಿದ್ದು, ಚರ್ಮದ ಅಲರ್ಜಿ, ಕ್ಯಾನ್ಸರ್, ಕಣ್ಣಿನ ಬೇನೆ ಮತ್ತು ಕುರುಡುತನ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕಾಂಟಾಕ್ಟ್ ಲೆನ್ಸ್‌ಗಳು ಕಡಿಮೆ ವೆಚ್ಚದ್ದಾಗಿದ್ದು, ಗುಲಾಲ್‌ ಲೇಪಿತವಾದ ಬಳಿಕ ಅವನ್ನು ಬಿಸಾಡಬಹುದು ಎಂದು ಮೆಹ್ತಾ ಹೇಳಿದರು.
ಮತ್ತಷ್ಟು
ಸುನಿತಾ ವಿಲಿಯಮ್ಸ್‌ಗೆ ಪಟೇಲ್ ಪ್ರಶಸ್ತಿ
ಪ್ರಣವ್ ಮುಖರ್ಜಿ ಅಮೆರಿಕಕ್ಕೆ ಪ್ರವಾಸ
ಅಣುಶಕ್ತಿಗೋಸ್ಕರ ಪರಮಾಣು ಒಪ್ಪಂದ: ಬಸು
ರಾಮಸೇತು:ಇಂದು ವಿಶೇಷ ಚರ್ಚೆ
ಕೇಂದ್ರದ ಡಿಎಂಕೆ ಸಚಿವರ ವಜಾಗೆ ಒತ್ತಾಯ
ನಾಲ್ವರು ಪತ್ರಕರ್ತರಿಗೆ ಜೈಲು ಶಿಕ್ಷೆ