ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಿರಣ್ ಬೇಡಿಗೆ ಬಾಬಾ ಫರೀದ್ ಪ್ರಶಸ್ತಿ
ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತೆ ಕಿರಣ್ ಬೇಡಿ ಅವರಿಗೆ ಫರೀದ್‌ಕೋಟ್‌ನಲ್ಲಿ ಭಾನುವಾರ ಬೆಳಿಗ್ಗೆ "ಬಾಬಾ ಫರೀದ್ ಪ್ರಾಮಾಣಿಕತೆ ಪ್ರಶಸ್ತಿ 2007" ನೀಡಿ ಪುರಸ್ಕರಿಸಲಾಯಿತು.

ಗುರುದ್ವಾರಾ ಗೊದಾರಿ ಸಾಹಿಬ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಬೇಡಿಗೆ ರಾಜಬ್‌ಪುರದ ಸಜಾದಾ ನಾಶಿನ್ ಬಾಬಾ ರಾಹಿದ್ ಫರೀದ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯು ಒಂದು ಲಕ್ಷ ನಗದು ಹಣ, ಪ್ರಶಸ್ತಿ ಪತ್ರ ಮತ್ತು ಶಾಲನ್ನು ಒಳಗೊಂಡಿದೆ.

ತಮ್ಮ ಸೇವೆಯಲ್ಲಿ ನಡೆದ ಕೆಲವು ಅವಿಸ್ಮರಣೀಯ ಘಟನೆಗಳನ್ನು ಬೇಡಿ ಮೆಲುಕು ಹಾಕಿದರು. "ತಿಹಾರ್ ಜೈಲಿನಲ್ಲಿ ಧೂಮಪಾನ ನಿಷೇಧ ಪ್ರಕಟಿಸಿದ ಬಳಿಕ ಕೆಲವು ಧೂಮಪಾನಿಗಳು ಆಮರಣ ಉಪವಾಸ ಕೈಗೊಂಡರು ಮತ್ತು ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದರು.

ದರೆ ಈ ಬೆದರಿಕೆಗೆ ನಾನು ಜಗ್ಗಲಿಲ್ಲ. ನನ್ನ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಂಡೆ. ಎಲ್ಲವೂ ಸರಿಹೋಗಲು 10 ದಿನಗಳು ಬೇಕಾದವು. ಆಗಿನಿಂದ ಜೈಲಿನಲ್ಲಿ ಧೂಮಪಾನಕ್ಕೆ ಅವಕಾಶ ನೀಡುತ್ತಿಲ್ಲ "ಎಂದು ಬೇಡಿ ಹೇಳಿದರು. ಧೂಮಪಾನಕ್ಕೆ ಅವಕಾಶವಿರದ ಜೈಲು ತಿಹಾರ್ ಮಾತ್ರ ಎಂದು ಅವರು ನುಡಿದರು.
ಮತ್ತಷ್ಟು
ತಮಿಳುನಾಡು ಬಿಜೆಪಿ ಕಚೇರಿಯಲ್ಲಿ ದಾಂಧಲೆ
ಶೇ.33 ಮೀಸಲಾತಿಗೆ ಬಿಜೆಪಿ ಅಸ್ತು
ಕ್ರೀಡಾ ಹಾಸ್ಟೆಲ್ ಸೇರಿದ ಬುಧಿಯಾ
ಕಾಂಟಾಕ್ಟ್ ಲೆನ್ಸ್ ಬಳಕೆಗೆ ಸಲಹೆ
ಸುನಿತಾ ವಿಲಿಯಮ್ಸ್‌ಗೆ ಪಟೇಲ್ ಪ್ರಶಸ್ತಿ
ಪ್ರಣವ್ ಮುಖರ್ಜಿ ಅಮೆರಿಕಕ್ಕೆ ಪ್ರವಾಸ