ಸೇತುಸಮುದ್ರಂ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆಯೇ ವಿನಾ ಬಿಜೆಪಿ ವಿರುದ್ಧವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಸೋಮವಾರ ತಿಳಿಸಿದರು.
ಕರುಣಾನಿಧಿ ವಿರುದ್ಧ ಬಿಜೆಪಿ ಮಾಜಿ ಸಂಸದ ರಾಮ್‌ವಿಲಾಸ್ ವೇದಾಂತಿ ದಿಕ್ತತ್ ನೀಡಿದ್ದನ್ನು ವಿರೋಧಿಸಿ, ಡಿಎಂಕೆ ಬೆಂಬಲಿಗರು ಬಿಜೆಪಿ ಕಚೇರಿಗಳು ಮತ್ತು ಬಿಜೆಪಿ ಧುರೀಣರ ನಿವಾಸಗಳಲ್ಲಿ ದಾಂಧಲೆ ನಡೆಸಿರುವ ನಡುವೆ ಕರುಣಾನಿಧಿ ಅವರ ಹೇಳಿಕೆ ಹೊರಬಿದ್ದಿದೆ.
ಸಮಾರಂಭವೊಂದರ ನೇಪಥ್ಯದಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ಪ್ರತಿಭಟನೆಗಳು ನಡೆಯುತ್ತಿದ್ದರೆ, ಸೇತುಸಮುದ್ರ ಯೋಜನೆ ಅನುಷ್ಠಾನದ ಸಲುವಾಗಿ ಹೊರತು ಬಿಜೆಪಿ ವಿರುದ್ಧವಲ್ಲ ಎಂದು ಅವರು ಹೇಳಿದರು.
ಕರುಣಾನಿಧಿ ಅವರ ತಲೆಗೆ ಬೆಲೆ ಕಟ್ಟಿರುವ ವೇದಾಂತಿ ದಿಕ್ತತ್ ವಿರುದ್ಧ ಡಿಎಂಕೆ ಬೆಂಬಲಿಗರು ಚೆನ್ನೈನಲ್ಲಿ ಬಿಜೆಪಿಯ ಮುಖ್ಯಕಚೇರಿ ಮತ್ತು ಹಿಂದು ಮನ್ನಾನಿ ಕಚೇರಿಗಳಿಗೆ ದಾಳಿ ಮಾಡಿತ್ತು.
ರಾಜ್ಯದ ಅಭಿವೃದ್ಧಿಗೆ 2500 ಕೋಟಿ ರೂ. ಸೇತುಸಮುದ್ರಂ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸಬೇಕೆಂದು ಕರುಣಾನಿಧಿ ಒತ್ತಾಯಿಸಿದ್ದಾರೆ. ಆದರೆ ಭಗವಾನ್ ರಾಮನು ನಿರ್ಮಿಸಿದ್ದಾನೆಂದು ನಂಬಿರುವ ರಾಮಸೇತುವನ್ನು ಒಡೆಯಲು ಸಂಘ ಪರಿವಾರದ ಗುಂಪುಗಳು ವಿರೋಧಿಸುತ್ತಿವೆ.
|