ಅವಧ್ ಎಕ್ಸ್‌ಪ್ರೆಸ್‌ನ ಐದು ಬೋಗಿಗಳು ಸೋಮವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವು ತಿಳಿಸಿವೆ.
ಉತ್ತರಪ್ರದೇಶದ ಗೋರಖ್‌ಪುರದಿಂದ ಮುಂಬೈಗೆ ಸಂಚರಿಸುವ ರೈಲು ಭಾರುಚ್ ಜಿಲ್ಲೆ ಮೂಲಕ ಸಂಚರಿಸುತ್ತಿದ್ದಾಗ, ಬೋಗಿಯೊಂದಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಲಾಯಿತು.
ಮಾಹಿತಿ ಸಿಕ್ಕಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಮತ್ತು ರೈಲು ಬೆಳಿಗ್ಗೆ 6 ಗಂಟೆಗೆ ಸಂಚಾರವನ್ನು ಆರಂಭಿಸಿತು.
ಬೆಂಕಿಗಾಹುತಿಯಾದ ಬೋಗಿಗಳನ್ನು ನಿಲ್ದಾಣದಲ್ಲೇ ಇರಿಸಲಾಗಿದೆ.ಹಾನಿಗೊಂಡ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಅದೇ ಎಕ್ಸ್‌ಪ್ರೆಸ್‌ನ ಇನ್ನುಳಿದ ಬೋಗಿಗಳಿಗೆ ಸ್ಥಳಾಂತರಿಸಿದ ಬಳಿಕ ರೈಲು ಮುಂಬೈಗೆ ತೆರಳಿತು ಎಂದು ಮೂಲಗಳು ಹೇಳಿವೆ.
|