ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಹ್ಯಾಕಾಶ ಸಮ್ಮೇಳನ ಇಂದು ಉದ್ಘಾಟನೆ
WD
ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೋಮವಾರ 58ನೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನವನ್ನು ಹೈದರಾಬಾದ್‌ನಲ್ಲಿ ಉದ್ಘಾಟಿಸಲಿದ್ದಾರೆ. ಬಾಹ್ಯಾಕಾಶ ಯುಗದ ಸುವರ್ಣಮಹೋತ್ಸವ ವರ್ಷಕ್ಕೆ ಈ ಸಮ್ಮೇಳನ ಹೊಂದಿಕೆಯಾಗುತ್ತದೆ.

ಹೈದರಾಬಾದಿನ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ವಾರವಿಡೀ ನಡೆಯುವ ಸಮ್ಮೇಳನದಲ್ಲಿ ರಷ್ಯಾ, ಜಪಾನ್, ಅಮೆರಿಕ, ಯುರೋಪ್‌ನ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 2000ಕ್ಕೂ ಹೆಚ್ಚು ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ.

ಮಹಿಳೆಯೊಬ್ಬರು ಬಾಹ್ಯಾಕಾಶದಲ್ಲಿ ದೀರ್ಘ ಕಾಲ ಉಳಿದು ದಾಖಲೆ ನಿರ್ಮಿಸಿದ ಭಾರತೀಯ ಮೂಲದ ಅಮೆರಿಕ ಬಾಹ್ಯಾಕಾಶಯಾತ್ರಿ ಸುನಿತಾ ವಿಲಿಯಮ್ಸ್ ಸೆ. 28ರಂದು ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾರೆ.

1300ಕ್ಕೂ ವಿಜ್ಞಾನಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಮತ್ತು ಬಾಹ್ಯಾಕಾಶ ಸಾರಿಗೆ, ಸಂಪರ್ಕ ಉಪಗ್ರಹಗಳು, ಮಾನವ ಬಾಹ್ಯಾಕಾಶ ಯಾತ್ರೆ, ಬಾಹ್ಯಾಕಾಶ ಶೋಧನೆ ಮತ್ತು ಗೃಹಗಳು ಮತ್ತು ಬಾಹ್ಯಾಕಾಶ ಕಾನೂನು ಮುಂತಾದ ವಿವಿಧ ವಿಷಯಗಳ ಬಗ್ಗೆ 134 ಸಮಾನಾಂತರ ತಾಂತ್ರಿಕ ಸಮಾವೇಶಗಳು ನಡೆಯಲಿದೆ.

ಬಾಹ್ಯಾಕಾಶ ಸಂಸ್ಥೆಗಳು ಮತ್ತು ಪ್ರಮುಖ ಕೈಗಾರಿಕಾ ಕಂಪೆನಿಗಳ ಉತ್ಪನ್ನಗಳನ್ನು ಪ್ರದರ್ಶಿಸುವ 90 ಬೂತ್‌ಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಎಕ್ಸ್ಪೊ ಕೂಡ ನಡೆಯಲಿದೆ.
ಮತ್ತಷ್ಟು
ಐದು ಬೋಗಿಗಳು ಬೆಂಕಿಗಾಹುತಿ
ಸೇತುಸಮುದ್ರಂಗೆ ಒತ್ತಾಯಿಸಿ ಪ್ರತಿಭಟನೆ
ಕಿರಣ್ ಬೇಡಿಗೆ ಬಾಬಾ ಫರೀದ್ ಪ್ರಶಸ್ತಿ
ತಮಿಳುನಾಡು ಬಿಜೆಪಿ ಕಚೇರಿಯಲ್ಲಿ ದಾಂಧಲೆ
ಶೇ.33 ಮೀಸಲಾತಿಗೆ ಬಿಜೆಪಿ ಅಸ್ತು
ಕ್ರೀಡಾ ಹಾಸ್ಟೆಲ್ ಸೇರಿದ ಬುಧಿಯಾ