ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರೈಲು ಸ್ಫೋಟ:ಶೀಘ್ರ ಪರಿಹಾರಕ್ಕೆ ಕ್ರಮ
ಕಳೆದ ವರ್ಷದ ಜುಲೈನಲ್ಲಿ ಮುಂಬೈನ ಸಬರ್ಬನ್ ರೈಲುಗಳಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗಳ ಸಂತ್ರಸ್ತರಿಗೆ ತಕ್ಷಣದ ಆರ್ಥಿಕ ಪರಿಹಾರಕ್ಕಾಗಿ ರೈಲ್ವೆ ಕ್ರಮಗಳನ್ನು ಕೈಗೊಂಡಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

ಸರಣಿ ಬಾಂಬ್ ಸ್ಫೋಟಗಳಲ್ಲಿ ಕ್ಲೇಮುಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಹೇಳಿದ ಅಧಿಕಾರಿಗಳು,ಪರಿಹಾರಗಳಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಮಿತಿ ಜತೆಗೆ ಕಾರ್ಯವಿಧಾನದ ಜಟಿಲತೆ ಕೂಡ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದರು,

ಸ್ಪೋಟದಲ್ಲಿ ಸತ್ತವರಿಗೆ 5 ಲಕ್ಷ ರೂ. ಪರಿಹಾರವನ್ನು ರೈಲ್ವೆ ಸಚಿವರು ಘೋಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ 50,000 ರೂ ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ 10,000 ಪರಿಹಾರವನ್ನು ಘೋಷಿಸಲಾಗಿದೆ.

ಸಚಿವಾಲಯವು 1045 ಪ್ರಕರಣಗಳಲ್ಲಿ ಪರಿಹಾರ ನೀಡಿದೆ.ತಪ್ಪು ವಿಳಾಸಗಳಿಂದ 15 ಪ್ರಕರಣಗಳು ಬಾಕಿವುಳಿದಿವೆ ಎಂದು ಅಧಿಕಾರಿಗಳು ತಿಳಿಸಿದರು, ಆದರೆ ನ್ಯಾಯಮಂಡಳಿಯಲ್ಲಿ ಕ್ಲೇಮುಗಳಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಕಾಲಮಿತಿಗೆ ಅವಕಾಶ ಇರುವುದರಿಂದ ಸ್ಪೋಟಕ್ಕೆ ಸಂಬಂದಿಸಿದ 735 ಪ್ರಕರಣಗಳ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ ಮತ್ತು 350 ಪ್ರಕರಣಗಳ ವಿಲೇವಾರಿಯಾಗಿದೆ.
ಮತ್ತಷ್ಟು
ಬಾಹ್ಯಾಕಾಶ ಸಮ್ಮೇಳನ ಇಂದು ಉದ್ಘಾಟನೆ
ಐದು ಬೋಗಿಗಳು ಬೆಂಕಿಗಾಹುತಿ
ಸೇತುಸಮುದ್ರಂಗೆ ಒತ್ತಾಯಿಸಿ ಪ್ರತಿಭಟನೆ
ಕಿರಣ್ ಬೇಡಿಗೆ ಬಾಬಾ ಫರೀದ್ ಪ್ರಶಸ್ತಿ
ತಮಿಳುನಾಡು ಬಿಜೆಪಿ ಕಚೇರಿಯಲ್ಲಿ ದಾಂಧಲೆ
ಶೇ.33 ಮೀಸಲಾತಿಗೆ ಬಿಜೆಪಿ ಅಸ್ತು