ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚಂದ್ರಯಾನ ಯೋಜನೆಗೆ ಸಮಸ್ಯೆಯಿಲ್ಲ
ಭಾರತದ ಚೊಚ್ಚಲ ಚಂದ್ರ ಯಾನ ಯೋಜನೆಯಾದ "ಚಂದ್ರಯಾನ್-1" ಮುಂದಿನ ವರ್ಷದ ಆರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಅಧ್ಯಕ್ಷ ಜಿ. ಮಾಧವನ್ ಸೋಮವಾರ ತಿಳಿಸಿದರು. ಕೇಂದ್ರದಲ್ಲಿ ಉದ್ಭವಿಸಿರುವ ಪ್ರಸಕ್ತ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಮೆರಿಕದಿಂದ ತಂತ್ರಜ್ಞಾನ ವರ್ಗಾವಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

56ನೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮಾವೇಶದ ನೇಪಥ್ಯದಲ್ಲಿ ಮಾತನಾಡುತ್ತಿದ್ದ ಅವರು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಜತೆ ಒಪ್ಪಂದದ ಪ್ರಕಾರ ಚಂದ್ರಯಾನದ ಪ್ರಗತಿ ಸುಸೂತ್ರವಾಗಿ ಸಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ರಾಜಕೀಯ ಬಿಕ್ಕಟ್ಟಿನಿಂದ ಅಮೆರಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ನಿರಾಕರಿಸುವುದರಲ್ಲಿ ಅಂತ್ಯಗೊಳ್ಳುವುದಿಲ್ಲವೆಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಮತ್ತಷ್ಟು
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ನೇಮಕ
ರೈಲು ಸ್ಫೋಟ:ಶೀಘ್ರ ಪರಿಹಾರಕ್ಕೆ ಕ್ರಮ
ಬಾಹ್ಯಾಕಾಶ ಸಮ್ಮೇಳನ ಇಂದು ಉದ್ಘಾಟನೆ
ಐದು ಬೋಗಿಗಳು ಬೆಂಕಿಗಾಹುತಿ
ಸೇತುಸಮುದ್ರಂಗೆ ಒತ್ತಾಯಿಸಿ ಪ್ರತಿಭಟನೆ
ಕಿರಣ್ ಬೇಡಿಗೆ ಬಾಬಾ ಫರೀದ್ ಪ್ರಶಸ್ತಿ