ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಾಮನ್‌ವೆಲ್ತ್ ಸಮಾವೇಶ ಇಂದು ಉದ್ಘಾಟನೆ
WD
ರಾಷ್ಟ್ರಪತಿ ಪ್ರತಿಭಾ ಪಾಟೀಲ್ 53ನೇ ಕಾಮನ್‌ವೆಲ್ತ್ ಸಂಸದೀಯ ಸಂಘಟನೆಯ ಸಮಾವೇಶವನ್ನು ಮಂಗಳವಾರ ಉದ್ಘಾಟಿಸಲಿದ್ದಾರೆ. ಸಂಸದೀಯ ವ್ಯವಹಾರ ಮತ್ತು ಮಾಹಿತಿ, ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಭಾರತೀಯ ಸಂಸತ್ತಿನ ನಿಯೋಗವನ್ನು ಮುನ್ನಡೆಸಲಿದ್ದಾರೆ.

ಭಾರತದ ನಿಯೋಗ ಮುಂದಿನ ಕೆಲವು ದಿನಗಳಲ್ಲಿ ಮಹಿಳೆಯರಿಗೆ ಅಧಿಕಾರ, ಜಾಗತಿಕ ತಾಪಮಾನ, ಪರಿಸರ, ಸಂಸತ್ತಿನಲ್ಲಿ ಮಹಿಳೆಯರ ಪಾತ್ರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲಿದೆ.

ಭಾರತದ ನಿಯೋಗ ಇಂತಹ ಎಲ್ಲಾ ಕಾರ್ಯಾಗಾರಗಳಲ್ಲಿ ಕಾಮನ್‌ವೆಲ್ತ್ ನಿಯೋಗದ ಜತೆ ಪಾಲ್ಗೊಳ್ಲಲಿದ್ದು, ಸೆ.28ರಂದು ಅದು ಮುಕ್ತಾಯಗೊಳ್ಳಲಿದೆ. ಸಿಪಿಎ ಸಮಾವೇಶದ ಆತಿಥ್ಯವನ್ನು ಭಾರತ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ.

ಪ್ರಜಾತಂತ್ರ ಆಡಳಿತದ ತಿಳಿವಳಿಕೆ ಮತ್ತು ಜ್ಞಾನ ಹೆಚ್ಚಿಸುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಪ್ರಗತಿಗೆ ಉತ್ತೇಜನ ನೀಡುವುದು ಸಿಪಿಎ ಯೋಜನೆಯಾಗಿದೆ.
ಮತ್ತಷ್ಟು
ಚಂದ್ರಯಾನ ಯೋಜನೆಗೆ ಸಮಸ್ಯೆಯಿಲ್ಲ
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ನೇಮಕ
ರೈಲು ಸ್ಫೋಟ:ಶೀಘ್ರ ಪರಿಹಾರಕ್ಕೆ ಕ್ರಮ
ಬಾಹ್ಯಾಕಾಶ ಸಮ್ಮೇಳನ ಇಂದು ಉದ್ಘಾಟನೆ
ಐದು ಬೋಗಿಗಳು ಬೆಂಕಿಗಾಹುತಿ
ಸೇತುಸಮುದ್ರಂಗೆ ಒತ್ತಾಯಿಸಿ ಪ್ರತಿಭಟನೆ