ಬಿಜೆಪಿಯ ಮುಖ್ಯಕಚೇರಿ ಮೇಲೆ ದಾಳಿಯನ್ನು ಪ್ರತಿಭಟಿಸಿ ಪಕ್ಷವು ಮಂಗಳವಾರ ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ನಡೆಸುವುದು ಎಂದು ಬಿಜೆಪಿ ನಿಯೋಗದ ಅಧ್ಯಕ್ಷ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎ. ಗಣೇಶನ್ ತಿಳಿಸಿದರು. ಎಲ್. ಗಣೇಶನ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಸ್. ತಿರುವನಕ್ಕರಸರ್ ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಿದರು.
ಇದಕ್ಕೆ ಮುನ್ನ ಡಿಎಂಕೆ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದ ಪಕ್ಷದ ಮುಖ್ಯಕಚೇರಿ ಕಮಲಲಾಯಂನಲ್ಲಿ ರಾಜ್ಯಘಟಕದ ಮುಖ್ಯಸಮಿತಿ ಸಭೆ ನಡೆಸಿತು. ಒಡೆದ ಗಾಜು ಮತ್ತು ಅಲ್ಲಲ್ಲಿ ಎಸೆದ ಕಲ್ಲುಗಳು ಸೋಮವಾರದ ಹಿಂಸಾಚಾರಕ್ಕೆ ಪಕ್ಷದ ಕಚೇರಿ ಸಾಕ್ಷಿಯಾಗಿ ನಿಂತಿತ್ತು.
ಸಭೆಯ ಬಳಿಕ ವರದಿಗಾರರ ಜತೆ ಮಾತನಾಡಿದ ಗಣೇಶನ್, ಈ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಲು ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು. ಡಿಎಂಕೆಯ ಹಿರಿಯ ನಾಯಕ ಮತ್ತು ವಿದ್ಯುತ್ ಸಚಿವ ಆರ್ಕಾಟ್ ವೀರಾಸ್ವಾಮಿ ಇಡೀ ವಿದ್ಯಮಾನಕ್ಕೆ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕರುಣಾನಿಧಿ ವಿರುದ್ದ ವೇದಾಂತಿಯ ಫತ್ವಾಗೆ ಪಕ್ಷವು ತಕ್ಕ ಉತ್ತರ ನೀಡುತ್ತದೆಂದು ಶನಿವಾರ ವೀರಾಸ್ವಾಮಿ ನೀಡಿದ ಹೇಳಿಕೆಯಿಂದ ಡಿಎಂಕೆ ಕಾರ್ಯಕರ್ತರು ಪ್ರಚೋದಿತರಾದರು ಎಂದು ಅವರು ಹೇಳಿದರು.
|