ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಮಾಂಗ್‌ಗೆ ಇಂಡಿಯನ್ ಐಡಲ್ ಕಿರೀಟ
ನವದೆಹಲಿ
PTI
ಪಶ್ಚಿಮ ಬಂಗಾಳದ ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೇಬಲ್ ಪ್ರಶಾಂತ್ ತಮಾಂಗ್ ಇಂಡಿಯನ್ ಐಡಲ್ ಕಿರೀಟವನ್ನು ಧರಿಸಿದ್ದಾರೆ. ಸುಮಾರು 2 ತಿಂಗಳ ಕಾಲದ ಟ್ಯಾಲೆಂಟ್ ಹಂಟ್ ಸ್ಪರ್ಧೆಯ ಫೈನಲ್‌ನಲ್ಲಿ ತನ್ನ ಎದುರಾಳಿ ಅಮಿತ್ ಪಾಲ್‌ನನ್ನು ಸೋಲಿಸಿದ ತಮಾಂಗ್ ಇಂಡಿಯನ್ ಐಡಲ್ ಪ್ರಶಸ್ತಿಗೆ ಪಾತ್ರರಾದರು.

24 ವರ್ಷ ಪ್ರಾಯದ ಡಾರ್ಜಿಲಿಂಗ್ ನಿವಾಸಿ.ಕೋಲ್ಕತ್ತಾದ ಪೊಲೀಸ್ ಬ್ಯಾಂಡ್ ಸದಸ್ಯನಾಗಿದ್ದ ತಮಾಂಗ್ ರಾಷ್ಟ್ರಾದ್ಯಂತ ಲಕ್ಷಾಂತರ ಟಿವಿ ವೀಕ್ಷಕರ ಹೃದಯ ಸೂರೆಮಾಡಿದ. ನವದೆಹಲಿಯಲ್ಲಿ ನಡೆದ ಫೈನಲ್ಸ್‌ನಲ್ಲಿ 7 ಕೋಟಿ ಜನರು ತಮ್ಮ ಮತಗಳನ್ನು ಕಳಿಸುವುದರೊಂದಿಗೆ ಟ್ಯಾಲೆಟ್ ಹಂಟ್ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಯಿತು.

ತಮಾಂಗ್ ಹಿಂದಿ ಚಿತ್ರ ಬಾಜಿಗರ್‌ನ ಕಾಲಿ ಕಾಲಿ ಆಂಕೇನ್ ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರ ಹೃದಯಸೂರೆಗೊಂಡರು. ಬಾಲಿವುಡ್ ನಟ ಜಾನ್ ಅಬ್ರಹಾಂ ತಮಾಂಗ್ ವಿಜೇತರೆಂದು ಪ್ರಕಟಿಸಿದರು. ತಮಾಂಗ್ ಭಾವಾತಿರೇಕ ತುಂಬಿದ ಧ್ವನಿಯಲ್ಲಿ ತನ್ನ ತಾಯಿಗೆ ಧನ್ಯವಾದ ಹೇಳಿದರು.
ಮತ್ತಷ್ಟು
ಬಿಜೆಪಿಯ ಜನಾಕೃಷ್ಣ ಮೂರ್ತಿ ನಿಧನ
ತಮಿಳುನಾಡಿನಲ್ಲಿ ಬಿಜೆಪಿ ಪ್ರತಿಭಟನೆ
ಕಾಮನ್‌ವೆಲ್ತ್ ಸಮಾವೇಶ ಇಂದು ಉದ್ಘಾಟನೆ
ಚಂದ್ರಯಾನ ಯೋಜನೆಗೆ ಸಮಸ್ಯೆಯಿಲ್ಲ
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ನೇಮಕ
ರೈಲು ಸ್ಫೋಟ:ಶೀಘ್ರ ಪರಿಹಾರಕ್ಕೆ ಕ್ರಮ