ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ದ ಫತ್ವಾ ಹೊರಡಿಸಿದ ಹಿನ್ನೆಲೆಯಲ್ಲಿ ಸಂಸದ ರಾಮ್ ವಿಲಾಸ್ ವೇದಾಂತಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ನಿವಾಸಿಯಾದ ಧನಂಚೇಳಿಯನ್ ಅವರು ವೇದಾಂತಿ ವಿರುದ್ದ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೋಮಗಳ ಮಧ್ಯೆ ಸಂಘರ್ಷ ಹರಡುತ್ತಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪುಣ್ಯ ಪುರುಷ ರಾಮನ ಬಗ್ಗೆ ಅವಹೇಳನವಾಗಿ ಹೇಳಿಕೆ ನೀಡಿದ ಕರುಣಾನಿಧಿಯವರ ತಲೆಯನ್ನು ತೆಗೆದವರಿಗೆ ಅಯೋಧ್ಯೆಯಲ್ಲಿ ಬಂಗಾರದಿಂದ ತುಲಾಭಾರ ಮಾಡುವುದಾಗಿ ಹೇಳಿಕೆ ನೀಡಿದ್ದರು.
ಬಿಜೆಪಿ ಮತ್ತು ಹಿಂದು ಮನ್ನಾನಿ ಪಕ್ಷಗಳ ಕಚೇರಿಗಳ ಮೇಲೆ ದಾಳಿ ನಡೆಸಲು ಯತ್ನಿಸಿದ 16 ಮಂದಿ ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನದಲ್ಲಿರುವುಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
|