ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹೈದರಾಬಾದ್ ನಿಜಾಮನ ಆಭರಣ ಪ್ರದರ್ಶನ
6 ವರ್ಷಗಳ ಅಂತರದ ಬಳಿಕ, ಹೈದರಾಬಾದ್ ನಿಜಾಮನ ಅಮೂಲ್ಯ ಆಭರಣಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ರಾಷ್ಟ್ರೀಯ ಮ್ಯೂಸಿಯಂ ಸಜ್ಜಾಗಿದೆ. 10,000 ಕೋಟಿ ರೂ. ಬೆಲೆಬಾಳುವ ಈ ಆಭರಣಗಳಿಗೆ 24 ಗಂಟೆಗಳೂ ಉನ್ನತ ತಂತ್ರಜ್ಞಾನದ ಬಿಗಿ ಕಾವಲು ಒದಗಿಸಲಾಗುವುದು.

ಚಿನ್ನ, ವಜ್ರ ಮತ್ತು ಮುತ್ತಿನ ಹಾರಗಳ ಬೆಲೆಕಟ್ಟಲಾಗದ ಸಂಗ್ರಹವೆಂದು ಹೇಳಲಾದ ಮತ್ತು ಆಕರ್ಷಕ ವಿನ್ಯಾಸ ಮತ್ತು ಸೌಂದರ್ಯದಿಂದ ಅಸೂಯೆ ಮತ್ತು ಅತ್ಯಾಸೆ ಮೂಡಿಸಿದ ಈ ಸಂಗ್ರಹವನ್ನು ಗುರುವಾರದಿಂದ ಪ್ರದರ್ಶನಕ್ಕೆ ಇಡಲಾಗುವುದು.

ಐಸಿಸಿಆರ್ ಅಧ್ಯಕ್ಷ ಕರಣ್ ಸಿಂಗ್ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಲಿದ್ದಾರೆ ಮತ್ತು ಸಂಸ್ಕೃತಿ ಸಚಿವ ಅಂಬಿಕಾ ಸೋನಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು 100 ಕೇಂದ್ರ ಕೈಗಾರಿಗಾ ಭದ್ರತಾ ಪಡೆ ಸಿಬ್ಬಂದಿ ಜತೆಗೆ ರಾಷ್ಟ್ರೀಯ ಮ್ಯೂಸಿಯಂನ ಕಾವಲುಗಾರರ ಬಿಗಿ ಕಾವಲನ್ನು ಅಮೂಲ್ಯ, ಮೋಹಕ ಆಭರಣಗಳ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ಮ್ಯೂಸಿಂಯನ ಅಧಿಕಾರಿಯೊಬ್ಬರು ತಿಳಿಸಿದರು.

348 ಚಿನ್ನ ಮತ್ತು ವಜ್ರದ ತುಂಡುಗಳ 173- ಸೆಟ್ ಸಂಗ್ರಹ ಮತ್ತು 184-75 ಕ್ಯಾರೆಟ್ ಕತ್ತರಿಸಿರದ, ವಿಶ್ವದಲ್ಲೇ ಮೂರನೇ ಅತೀ ದೊಡ್ಡದಾದ ಜಾಕೋಬ್ ವಜ್ರ, 150 ದೊಡ್ಡ ಮತ್ತು 230 ಸಣ್ಣ ಮಣಿಗಳ ಮುತ್ತಿನ ಆಭರಣ ಮುಂತಾದ ಅಮೂಲ್ಯ ಆಭರಣಗಳು ಪ್ರದರ್ಶನದಲ್ಲಿವೆ.

ಸುಮಾರು 17 ವರ್ಷಗಳ ಕಾಲ ಕಾನೂನು ಹೋರಾಟದ ಬಳಿಕ ಕೇಂದ್ರ ಸರ್ಕಾರ ಈ ಆಭರಣಗಳನ್ನು ನಿಜಾಮರ ಆಭರಣ ಟ್ರಸ್ಟ್‌ಗೆ 218 ಕೋಟಿ ರೂ,ಗಳನ್ನು ಪಾವತಿಸಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಆಭರಣಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10,000 ಕೋಟಿ ರೂ. ಬೆಲೆಬಾಳುತ್ತದೆ.
ಮತ್ತಷ್ಟು
ಕರುಣಾನಿಧಿ ವಿರುದ್ದ ಫತ್ವಾ: ದೂರು ದಾಖಲು
ತಮಾಂಗ್‌ಗೆ ಇಂಡಿಯನ್ ಐಡಲ್ ಕಿರೀಟ
ಬಿಜೆಪಿಯ ಜನಾಕೃಷ್ಣ ಮೂರ್ತಿ ನಿಧನ
ತಮಿಳುನಾಡಿನಲ್ಲಿ ಬಿಜೆಪಿ ಪ್ರತಿಭಟನೆ
ಕಾಮನ್‌ವೆಲ್ತ್ ಸಮಾವೇಶ ಇಂದು ಉದ್ಘಾಟನೆ
ಚಂದ್ರಯಾನ ಯೋಜನೆಗೆ ಸಮಸ್ಯೆಯಿಲ್ಲ