11 ದಿನಗಳ ಗಣೇಶನ ಸಂಭ್ರಮೋತ್ಸವದ ಬಳಿಕ ಅನಂತಚತುರ್ದಶಿ ದಿನವಾದ ಮಂಗಳವಾರ ಲಕ್ಷಾಂತರ ಜನರು ಭಗವಾನ್ ಗಣೇಶನಿಗೆ ಅಂತಿಮ ವಿದಾಯ ಹೇಳಿದರು. ಗಣೇಶ ವಿಗ್ರಹಗಳನ್ನು, ಮೂರ್ತಿಗಳನ್ನು ಅಂತಿಮ ನೆಲೆಯಾದ ಕೆರೆಗಳು ಮತ್ತು ಸಮುದ್ರ ತೀರಗಳಲ್ಲಿ ಭಕ್ತಾದಿಗಳು ವಿಸರ್ಜಿಸಿ ಕೃತಾರ್ಥರಾದರು.
ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಜಡಿಮಳೆಯನ್ನು ಲೆಕ್ಕಿಸದೇ ಡೋಲುಗಳ ನಿನಾದ, ಗುಲಾಲ್ ಸಿಂಪಡಿಕೆ ಮತ್ತು ಭಕ್ತಾದಿಗಳ ಭಕ್ತಿಭಾವದ ನರ್ತನದಿಂದ ಗಣೇಶನ ಮೆರವಣಿಗೆಗಳು ಹೊರಟವು.
ಗಣಪತಿ ಬಾಪಾ ಮೋರಿಯಾ, ಪುಡಚ್ಯಾ ವರ್ಸಿ ಲೌಕರ್ ಯಾ ಘೋಷಣೆಗಳು ಮುಗಿಲು ಮುಟ್ಟಿದವು. ಸಾರ್ವಜನಿಕ ಮಂಡಲದ ಮೂರ್ತಿಗಳ ದಟ್ಟಣೆ ತಪ್ಪಿಸಲು ಮನೆಗಳ ಗಣಪತಿಗಳನ್ನು ಮಧ್ಯಾಹ್ನದೊಳಗೆ ವಿಸರ್ಜಿಸಲಾಯಿತು,
|