ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರೈಲ್ವೆಯ ಮುಂದಿನ ಬಜೆಟ್ ಅಭೂತಪೂರ್ವ: ಲಾಲು
PTI
ರೈಲ್ವೆಯ ಮುಂದಿನ ಬಜೆಟ್ ಅಭೂತಪೂರ್ವ ಮತ್ತು ಆಶ್ಚರ್ಯಕರವಾಗಿರುತ್ತದೆ ಎಂದು ರೈಲ್ವೆ ಸಚಿವ ಲಾಲು ಪ್ರಸಾದ್ ಭರವಸೆ ನೀಡಿದ್ದು, ರಾಷ್ಟ್ರದಲ್ಲಿ ರೈಲ್ವೆ ಜಾಲವನ್ನು ಇನ್ನಷ್ಟು ವಿಸ್ತರಿಸಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಮೋತಿಹಾರಿ ಮತ್ತು ವಾರಣಾಸಿ ನಡುವೆ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.ರೈಲ್ವೆ ದೇಶದ ಜೀವಾಧಾರ ಎಂದು ರೈಲ್ವೆಯನ್ನು ಅವರು ಬಣ್ಣಿಸಿದರು.

ಭಾರತ ವಿಶ್ವದಲ್ಲೇ ದೊಡ್ಡದಾದ ರೈಲ್ವೆ ಜಾಲವನ್ನು ಹೊಂದಿದ್ದರೂ, ರೈಲ್ವೆ ಮುಟ್ಟಲಾಗದ ಜನರ ಬಳಿ ತಲುಪಿಸಲು ನಾವು ಬಯಸಿದ್ದೇವೆ ಎಂದು ಅವರು ಹೇಳಿದರು.

39 ರೈಲು- ರಸ್ತೆ ಮೇಲ್ಸೇತುವೆಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಗಂಗಾ ನದಿಗೆ ದಿಘಾ ಮತ್ತು ಸೋನೆಪುರ್ ನಡುವೆ ರೈಲು ಮತ್ತು ರಸ್ತೆ ಸೇತುವೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 2009ರೊಳಗೆ ಮುಗಿಯಲಿದೆ ಎಂದು ಹೇಳಿದ ಲಾಲು ರೈಲು ಯೋಜನೆಗಳನ್ನು ತಮ್ಮ ಪೂರ್ವಾಧಿಕಾರಿಗಳು ಅಲಕ್ಷಿಸಿದರೆಂದು ಹೇಳಿದರು.
ಮತ್ತಷ್ಟು
ರಾಮ ಸೇತು ಯೋಜನೆ: ಬದಲಾವಣೆಗೆ ವಿರೋಧ
ನ್ಯಾಯಾಂಗದ ಬಗ್ಗೆ ಮಲತಾಯಿ ಧೋರಣೆ
ಗಣೇಶ ಮೂರ್ತಿಗಳ ಸಂಭ್ರಮದ ವಿಸರ್ಜನೆ
ಹೈದರಾಬಾದ್ ನಿಜಾಮನ ಆಭರಣ ಪ್ರದರ್ಶನ
ಕರುಣಾನಿಧಿ ವಿರುದ್ದ ಫತ್ವಾ: ದೂರು ದಾಖಲು
ತಮಾಂಗ್‌ಗೆ ಇಂಡಿಯನ್ ಐಡಲ್ ಕಿರೀಟ