ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಮಸೇತು ಚಿತ್ರ ನೋಡಿಲ್ಲ: ಗ್ರಿಫಿನ್
ರಾಮಸೇತು ಅಥವಾ ಅಡಾಮ್ಸ್ ಬ್ರಿಜ್ ಮಾನವ ನಿರ್ಮಿತ ಅಥವಾ ಸ್ವಾಭಾವಿಕ ರಚನೆ ಎಂಬ ಬಗ್ಗೆ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳಲು ನಾಸಾ ಮುಖ್ಯಸ್ಥ ಮೈಕೆಲ್ ಗ್ರಿಫಿನ್ ಮಂಗಳವಾರ ನಿರಾಕರಿಸಿದ್ದಾರೆ.

ನಾಸಾ ಬಾಹ್ಯಾಕಾಶಯಾನಿಗಳು ಹಲವಾರು ವರ್ಷಗಳ ಹಿಂದೆ ತೆಗೆದ ಅಡಾಮ್ಸ್ ಬ್ರಿಜ್‌ನ ‌ಮೇಲ್ಮೈ ಛಾಯಾಚಿತ್ರಗಳನ್ನು ತಾವು ನೋಡಿಲ್ಲ ಎಂದು ಖಾಸಗಿ ಟಿವಿ ಚಾನೆಲ್‌ಗೆ ಅವರು ತಿಳಿಸಿದರು. "ನೀವು ಹೇಳುತ್ತಿರುವುದೇನೆಂದು ನನಗೆ ಗೊತ್ತಿಲ್ಲ, ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದರು.

ಅಡಾಮ್ಸ್ ಬ್ರಿಜ್ ಪ್ರದೇಶದಲ್ಲಿ ಸೇತುಸಮುದ್ರಂ ಕಾಲುವೆ ಯೋಜನೆ ನಿರ್ಮಾಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ವಿರೋಧಿಸುತ್ತಿದ್ದು, ಮಾನವ ನಿರ್ಮಿತ ರಾಮಸೇತುವನ್ನು ನಾಶಗೊಳಿಸಬಾರದು ಎಂದು ಹೇಳಿವೆ.
ಮತ್ತಷ್ಟು
ರೈಲ್ವೆಯ ಮುಂದಿನ ಬಜೆಟ್ ಅಭೂತಪೂರ್ವ
ರಾಮ ಸೇತು ಯೋಜನೆ: ಬದಲಾವಣೆಗೆ ವಿರೋಧ
ನ್ಯಾಯಾಂಗದ ಬಗ್ಗೆ ಮಲತಾಯಿ ಧೋರಣೆ
ಗಣೇಶ ಮೂರ್ತಿಗಳ ಸಂಭ್ರಮದ ವಿಸರ್ಜನೆ
ಹೈದರಾಬಾದ್ ನಿಜಾಮನ ಆಭರಣ ಪ್ರದರ್ಶನ
ಕರುಣಾನಿಧಿ ವಿರುದ್ದ ಫತ್ವಾ: ದೂರು ದಾಖಲು