ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶೀಘ್ರದಲ್ಲಿ ತರಕಾರಿ ಡಿಸೆಲ್ ಮಾರುಕಟ್ಟೆಗೆ
ಚೆನ್ನೈನ ಕೇಂದ್ರ ಚರ್ಮೋದ್ಯಮ ಸಂಶೋಧನಾ ಸಂಸ್ಥೆಯು ಬುದವಾರ, ಚೆನ್ನೈನಲ್ಲಿ ತರಕಾರಿಗಳಿಂದ ಉತ್ಪಾದಿಸಲಾಗಿರುವ ಜೈವಿಕ ಡಿಸೆಲ್‌ನ ತಂತ್ರಜ್ಞಾನವನ್ನು ಪರಿಚಯಿಸಿತು.

ಸುದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಎಲ್ಆರ್ಐ ನಿರ್ದೇಶಕ ಆರ್ ಎ ಮಂಡಲ್ ಅವರು, ಸಂಶೋಧಿತ ತಂತ್ರಜ್ಞಾನದ ಪರೀಕ್ಷಣೆಯನ್ನು ಡೆಹರಾಡೂನ್‌ದಲ್ಲಿ ಇರುವ ಇಂಡಿಯನ್ ಇನ್ಸಟ್ಯಿಟೂಟ್ ಆಫ್ ಪೆಟ್ರೋಲಿಯಂ ಮಾಡಿದ್ದು ಸುಮಾರು 26 ಸಾವಿರ ಕಿಮಿ ವಾಹನವನ್ನು ಓಡಿಸಿ ತಂತ್ರಜ್ಞಾನದ ಅನುಷ್ಠಾನಕ್ಕೆ (ಬಳಕೆಗೆ) ಒಪ್ಪಿಗೆ ನೀಡಿದ್ದು, ಸಿಎಲ್ಆರ್ಐನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ಅಭಿವೃದ್ದಿ ಪಡಿಸಿದ್ದು, ತಂತ್ರಜ್ಞಾನಕ್ಕೆ ಪೆಟೆಂಟ್ ಹಕ್ಕು ದೊರೆತಿದೆ.

ತಂತ್ರಜ್ಞಾನವನ್ನು ವೆಲ್ ಬೈಯೋ-ಡಿಸೇಲ್ ಎನರ್ಜಿ ಎಂಬ ಕಂಪನಿ 89.88 ಲಕ್ಷ ರೂಗಳಿಗೆ ಖರೀದಿಸಿದೆ. ಕಂಪನಿಯ ಚೇರಮನ್ ವೆಲಾಯುಥನ್ ಅವರಿಗೆ ಇದೇ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಲಾಯಿತು.

ತಂತ್ರಜ್ಞಾನದ ಬಳಕೆಯ ಪ್ರಾರಂಬಿಕ ಹಂತವಾಗಿ ತಿರುಚಿರಾಪಳ್ಳಿಯಲ್ಲಿ ಮೊದಲ ಉತ್ಪಾದನಾ ಘಟಕ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ನಂತರ ದೇಶಾದ್ಯಂತ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದು ವೆಲಾಯುದನ್ ಹೇಳಿದರು.
ಮತ್ತಷ್ಟು
ಮಾನವ-ಪ್ರಾಣಿ ಸಂಘರ್ಷಕ್ಕೆ ಕರಡಿ ಬಲಿ
ರಾಮಸೇತು ಚಿತ್ರ ನೋಡಿಲ್ಲ: ಗ್ರಿಫಿನ್
ರೈಲ್ವೆಯ ಮುಂದಿನ ಬಜೆಟ್ ಅಭೂತಪೂರ್ವ
ರಾಮ ಸೇತು ಯೋಜನೆ: ಬದಲಾವಣೆಗೆ ವಿರೋಧ
ನ್ಯಾಯಾಂಗದ ಬಗ್ಗೆ ಮಲತಾಯಿ ಧೋರಣೆ
ಗಣೇಶ ಮೂರ್ತಿಗಳ ಸಂಭ್ರಮದ ವಿಸರ್ಜನೆ