ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಪ್ರಯತ್ನ
WD
ಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಮುದಾಯ ಜಂಟಿ ಪ್ರಯತ್ನಗಳನ್ನು ಮಾಡಬೇಕೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ಕರೆ ನೀಡಿದರು. ಭಾರತ ಎಲ್ಲ ದೇಶಗಳ ಜತೆ ವ್ಯಾಪಾರ ಸಂಬಂಧ ಹೆಚ್ಚಳ ಮತ್ತು ಜನರ ನಡುವೆ ಸಂಪರ್ಕ ಸೇರಿದಂತೆ ಸ್ನೇಹ ಬಾಂಧವ್ಯ ಇಟ್ಟುಕೊಳ್ಳಲು ಬಯಸುತ್ತದೆ ಎಂದು ಹೇಳಿದರು.

ರಾಷ್ಟ್ರಪತಿ ಭವನದಲ್ಲಿ ಪರಿಚಯ ಪತ್ಪ ನೀಡುವ ಸಮಾರಂಭದಲ್ಲಿ ರಾಜತಾಂತ್ರಿಕರ ಜತೆ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು, ಫ್ರೆಂಚ್ ರಾಯಭಾರಿ ಜೆರಾಮ್ ಬೊನಾಪೋಂಟ್ ಮತ್ತು ಬ್ರಿಟನ್ ಹೈ ಕಮೀಷನರ್ ಚಾರ್ಲೆಸ್ ರಿಚರ್ಡ್ ವರ್ನಾನ್ ಸೇರಿದಂತೆ 8 ರಾಜತಾಂತ್ರಿಕರು ರಾಷ್ಟ್ರಪತಿಗೆ ತಮ್ಮ ಪರಿಚಯ ಪತ್ರಗಳನ್ನು ನೀಡಿದರೆಂದು ರಾಷ್ರಪತಿ ಭವನದ ವಕ್ತಾರ ತಿಳಿಸಿದ್ದಾರೆ.

ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿ ಮೂಡಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದ ರಾಷ್ಟ್ರಪತಿ, ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ಒಂದಾಗಿ ಹೋರಾಡಬೇಕೆಂದು ತಿಳಿಸಿದ್ದಾಗಿ ವಕ್ತಾರ ಹೇಳಿದರು.
ಮತ್ತಷ್ಟು
ಕೇಂದ್ರದ ಇಬ್ಬಗೆಯ ನೀತಿ:ರಾಜನಾಥ್
ಶೀಘ್ರದಲ್ಲಿ ತರಕಾರಿ ಡಿಸೆಲ್ ಮಾರುಕಟ್ಟೆಗೆ
ಮಾನವ-ಪ್ರಾಣಿ ಸಂಘರ್ಷಕ್ಕೆ ಕರಡಿ ಬಲಿ
ರಾಮಸೇತು ಚಿತ್ರ ನೋಡಿಲ್ಲ: ಗ್ರಿಫಿನ್
ರೈಲ್ವೆಯ ಮುಂದಿನ ಬಜೆಟ್ ಅಭೂತಪೂರ್ವ: ಲಾಲು
ರಾಮ ಸೇತು ಯೋಜನೆ: ಬದಲಾವಣೆಗೆ ವಿರೋಧ