ಗೋವಾದಲ್ಲಿ ಅ.1ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ರೈಲ್ವೆ ಸುರಕ್ಷತೆ ಸಮಾವೇಶದಲ್ಲಿ ಅಮೆರಿಕ, ಕೆನಡ, ಆಸ್ಟ್ರೇಲಿಯ, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್ ಸೇರಿದಂತೆ 15-20 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇಂಡಿಯನ್ ರೈಲ್ವೆ ಮತ್ತು ಕೊಂಕಣ ರೈಲ್ವೆ ನಿಗಮ ಐದು ದಿನಗಳ ಈ ಸಮಾವೇಶವನ್ನು ಏರ್ಪಡಿಸಿದೆ. ಇದೊಂದು ವಾರ್ಷಿಕ ಕಾರ್ಯಕ್ರಮವಾಗಿದ್ದು, ರೈಲ್ವೆ ಸುರಕ್ಷತೆ ಮ್ಯಾನೇಜರ್‌ಗಳು, ಸುರಕ್ಷತೆ ನಿಯಂತ್ರಕರು ಮತ್ತು ಅಪಘಾತ ತನಿಖಾ ಸಂಸ್ಥೆಗಳು ಕೂಡ ಭಾಗವಹಿಸುತ್ತಿವೆ . ಸಮಾವೇಶದಲ್ಲಿ ರೈಲ್ವೆ ಸುರಕ್ಷತೆ ತಜ್ಞರು "ರೈಲ್ವೆ ಸುರಕ್ಷತೆಯ ಪ್ರಸಕ್ತ ಆಯಾಮಗಳ" ಅತ್ಯುತ್ತಮ ಅಬ್ಯಾಸ ಮತ್ತು ಜಾಗತಿಕ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಸಕ್ತ ಸುರಕ್ಷತೆ ವಿಧಾನಗಳ ಮಾಹಿತಿ ವಿನಿಯಮಕ್ಕೆ ವಿವಿಧ ಅಂತಾರಾಷ್ಟ್ರೀಯ ರೈಲ್ವೆ ವ್ಯವಸ್ಥೆಗಳ ನಿಯೋಗಿಗಳಿಗೆ ಇದು ವೇದಿಕೆ ಒದಗಿಸಿದೆ.
|