ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಲಡಕ್‌ನಲ್ಲಿ ಮಿಲಿಟರಿ ಅಭ್ಯಾಸಕ್ಕೆ ಖಂಡನೆ
ಭಾರತ-ಬ್ರಿಟನ್ ಲಡಕ್‌ನ ಎತ್ತರದ ಪ್ರದೇಶಗಳಲ್ಲಿ ಮಿಲಿಟರಿ ಅಭ್ಯಾಸ ನಡೆಸುತ್ತಿರುವುದನ್ನು ತೀವ್ರವಾದಿ ಬಣದ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಸೈಯದ್ ಅಲಿ ಶಾ ಗಿಲಾನಿ ಖಂಡಿಸಿದ್ದಾರೆ. ಲಡಕ್ ಕೂಡ ವಿವಾದಿತ ಕಾಶ್ಮೀರದ ಭಾಗವಾಗಿದ್ದು, ಜಂಟಿ ಮಿಲಿಟರಿ ಅಭ್ಯಾಸ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಲಡಕ್ ಅಥವಾ ಸಿಯಾಚಿನ್ ಆಗಿರಲಿ, ಕಾಶ್ಮೀರದ ಇಡೀ ಪ್ರದೇಶ ವಿವಾದಿತವಾಗಿದೆ. ಜಮ್ಮುಕಾಶ್ಮೀರದ ಜನರು ಜನಾಭಿಮತದ ಮೂಲಕ ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳುವ ತನಕ ವಿವಾದಿತ ಪ್ರದೇಶದಲ್ಲಿ ಎಲ್ಲ ಅಭ್ಯಾಸಗಳೂ ಅಕ್ರಮವೆನಿಸುತ್ತದೆ ಎಂದು ಅವರು ಹೇಳಿದರು.

. ತಮ್ಮ ಗುಂಪು ಚುನಾವಣೆ ಬಹಿಷ್ಕರಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು. ಕಾಶ್ಮೀರದ ಜನರು ಪ್ರತಿ ಚುನಾವಣೆಯನ್ನು ಬಹಿಷ್ಕರಿಸುವ ನಿಲುವನ್ನು ಅಳವಡಿಸಿಕೊಳ್ಳಬೇಕು. ಇದು ಪ್ರಜಾತಂತ್ರದ ಉತ್ತರವಾದ್ದರಿಂದ ಅತೀ ಮುಖ್ಯವಾಗಿದೆ ಎಂದು ಹೇಳಿದರು.

ಭಾರತ ಮತ್ತು ಬ್ರಿಟನ್ ಪಡೆಗಳು ಲಡಖ್‌ನ ಶಿಖರಾಗ್ರದಲ್ಲಿ "ಹಿಮಾಲಯನ್ ವಾರಿಯರ್" ಸಮರಾಭ್ಯಾಸವನ್ನು ಕಳೆದ ತಿಂಗಳು ಆರಂಭಿಸಿರುವುದು ಕಾಶ್ಮೀರದ ಮುಸ್ಲಿಂ ಬಣಗಳು ಮತ್ತು ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ.
ಮತ್ತಷ್ಟು
ಗೋವಾದಲ್ಲಿ ರೈಲ್ವೆ ಸುರಕ್ಷತೆ ಸಮಾವೇಶ
ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಪ್ರಯತ್ನ
ಕೇಂದ್ರದ ಇಬ್ಬಗೆಯ ನೀತಿ:ರಾಜನಾಥ್
ಶೀಘ್ರದಲ್ಲಿ ತರಕಾರಿ ಡಿಸೆಲ್ ಮಾರುಕಟ್ಟೆಗೆ
ಮಾನವ-ಪ್ರಾಣಿ ಸಂಘರ್ಷಕ್ಕೆ ಕರಡಿ ಬಲಿ
ರಾಮಸೇತು ಚಿತ್ರ ನೋಡಿಲ್ಲ: ಗ್ರಿಫಿನ್