ಮಹಿಳೆಯರಿಂದ ಶೋಷಣೆಗೊಳಗಾದ ಪುರುಷರಿಗಾಗಿರುವ ವಿಶಿಷ್ಠ ಸಂಘಟನೆಯಾದ ಅಖಿಲ ಭಾರತ ಮಹಿಳಾ ಪೀಡಿತ್ ಸಂಘರ್ಷ ಮೋರ್ಚಾ ಮಹಿಳೆಯರ ರಾಷ್ಟ್ರೀಯ ಆಯೋಗದ ರೀತಿಯಲ್ಲಿ ಪುರುಷರ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದೆ.
"ಮಹಿಳೆಯರು ತಮಗಿರುವ ವಿಶೇಷ ಕಾನೂನು ಹಕ್ಕುಗಳ ದುರುಪಯೋಗದಿಂದ ಪುರುಷರಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆ. ವರದಕ್ಷಿಣೆ ಕಿರುಕುಳ, ಚುಡಾಯಿಸುವಿಕೆ. ದೈಹಿಕ ಮತ್ತು ಮಾನಸಿಕ ಹಿಂಸೆಯ ಕಟ್ಟುಕಥೆಗಳನ್ನು ಸೃಷ್ಟಿಸಿ ಪುರುಷರನ್ನು ಸಿಕ್ಕಿಹಾಕಿಸುವ ಪ್ರಕರಣಗಳು ಹೆಚ್ಚಿವೆ "ಎಂದು ಮೋರ್ಚಾ ಸಂಚಾಲಕ ಸೋಯಬ್ ಅಜಾಮ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರ ಬಗ್ಗೆ ಗಮನನೀಡದಿದ್ದರೆ, ಅನೇಕ ಮಂದಿ ಪುರುಷರು ಮದುವೆಯಾಗಲು ಹಿಂಜರಿದು, ಸಾಮಾಜಿಕ ಸಮತೋಲನ ಹದತಪ್ಪುತ್ತದೆ. ಮೋರ್ಚಾದ ಗುರಿ ನ್ಯಾಯ ನೀಡುವುದು ಮಾತ್ರವಲ್ಲ, ಪುರುಷರ ಹಕ್ಕು, ಗೌರವ ಖಾತರಿಗೆ ಮತ್ತು ಮಹಿಳಾ ಹಕ್ಕುಗಳ ದುರ್ಬಳಕೆ ತಡೆ ಕೂಡ ಸೇರಿದೆ ಎಂದು ಅವರು ಹೇಳಿದರು.
|