ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತುಟಿಬಿಚ್ಚದೆ ಬಿಜೆಪಿ ಮೌನ
ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಧಿಕಾರ ಹಸ್ತಾಂತರ ಕುರಿತು ಮಾತುಕತೆಯಾಡದೇ ವಾಪಸಾಗಿದ್ದಕ್ಕೆ ಬಿಜೆಪಿ ಗುರುವಾರ ತುಟಿಬಿಚ್ಚದೇ ಮೌನವಹಿಸಿದೆ."ದೇವೇಗೌಡ ಅವರು ಬಿಜೆಪಿ ಉಪಾಧ್ಯಕ್ಷ ಮತ್ತು ಕರ್ನಾಟಕ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಯಶವಂತ ಸಿನ್ಹಾ ನಡುವೆ ಮಾತುಕತೆ ಬಳಿಕ ಪ್ರತಿಪಕ್ಷದ ನಾಯಕ ಆಡ್ವಾಣಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಜತೆ ಬೇಟಿ ನಿಗದಿಯಾಗಿತ್ತು,

ಜೆಡಿಎಸ್ ಬಿಜೆಪಿಗೆ ಒಪ್ಪಂದದ ಪ್ರಕಾರ ಅ.3ರಂದು ಅಧಿಕಾರ ಹಸ್ತಾಂತರ ಮಾಡಬೇಕಿದೆ" ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ತಿಳಿಸಿದರು.ಬಿಜೆಪಿ ಸದ್ಯಕ್ಕೆ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಶುಕ್ರವಾರದಿಂದ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಅದು ಗಮನವಹಿಸಿದೆ ಎಂದು ರೂಢಿ ಹೇಳಿದರು.

ದೇವೇಗೌಡರು ಸಭೆಗೆ ಹಾಜರಾಗದೇ ಜಾರಿಕೊಂಡ ವಿಷಯ ತಿಳಿದ ಕೂಡಲೇ ರಾಮಸೇತು ವಿಷಯ ಚರ್ಚಿಸಲು ಸೇರಿದ್ದ ಪದಾಧಿಕಾರಿಗಳು ಈ ವಿಷಯವನ್ನು ಸಂಕ್ಷಿಪ್ತವಾಗಿ ಚರ್ಚಿಸಿದರೆಂದು ಗೊತ್ತಾಗಿದೆ.

ರಾಮಸೇತು ವಿಷಯದ ಬಗ್ಗೆ ರಾಷ್ಚ್ರಪತಿಯನ್ನು ಬೇಟಿ ಮಾಡಿದ ಬಿಜೆಪಿ ನಾಯಕರು ರಾಷ್ಟ್ರಪತಿ ಭವನದಲ್ಲಿ ಕರ್ನಾಟಕದ ಬಗ್ಗೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ನುಣುಚಿಕೊಂಡರು.
ಮತ್ತಷ್ಟು
ಪುರುಷರ ರಾಷ್ಟ್ರೀಯ ಆಯೋಗಕ್ಕೆ ಒತ್ತಾಯ
ಲಡಕ್‌ನಲ್ಲಿ ಮಿಲಿಟರಿ ಅಭ್ಯಾಸಕ್ಕೆ ಖಂಡನೆ
ಗೋವಾದಲ್ಲಿ ರೈಲ್ವೆ ಸುರಕ್ಷತೆ ಸಮಾವೇಶ
ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಪ್ರಯತ್ನ
ಕೇಂದ್ರದ ಇಬ್ಬಗೆಯ ನೀತಿ:ರಾಜನಾಥ್
ಶೀಘ್ರದಲ್ಲಿ ತರಕಾರಿ ಡಿಸೆಲ್ ಮಾರುಕಟ್ಟೆಗೆ