ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಿಡ್ ಡೆ ಪತ್ರಕರ್ತರಿಗೆ ಜಾಮೀನು
ವೈ ಕೆ ಸಬರವಾಲ್ ವಿರುದ್ಧ ಲೇಖನ ಬರೆದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆಪಾದಿತರಾಗಿದ್ದ ನಾಲ್ವರು ಮಿಡ್ ಡೆ ಪತ್ರಕರ್ತರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಅರಜೀತ್ ಪಸಾಯತ್ ಮತ್ತು ಪಿ. ಸದಾಶಿವಮ್ ಅವರನ್ನು ಒಳಗೊಂಡ ವಿಚಾರಣಾ ಪೀಠ, ಪತ್ರಿಕೆ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿ, ದೆಹಲಿ ಹೈಕೋರ್ಟ್ ನೀಡಿದ್ದ ನಾಲ್ಕು ತಿಂಗಳ ಶಿಕ್ಷೆಗೆ ತಡೆಯಾಜ್ಞೆ ನೀಡಿತು.

ಮಿಡ್ ಡೆ ಪತ್ರಿಕೆಯ ಮನವಿಯನ್ನು ಸ್ವೀಕರಿಸಿದ ವಿಚಾರಣಾ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಾಲಿಸಿಟರ್ ಜನರಲ್ ಎ ಆರ್ ಅಂಧಿಯಾರ್ಜುನ್ ಅವರನ್ನು ನ್ಯಾಯಾಂಗ ಸಲಹೆಗಾರ ಎಂದು ನೇಮಕ ಮಾಡಿದೆ.

ವೈ ಕೆ ಸಬರವಾಲ್ ಪ್ರಕರಣದಲ್ಲಿ ಪತ್ರಿಕೆ ಮಾಡಿರುವ ವರದಿ ಮತ್ತು ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ತಟಸ್ಥ ರೂಪದಲ್ಲಿ ನ್ಯಾಯಾಂಗಕ್ಕೆ ಅಂಧಿಯಾರ್ಜುನ ಆಪಾದಿತರಿಗೆ ಶಿಕ್ಷೆ ಉರ್ಜಿತಗೊಳಿಸುವ ಇಲ್ಲವೆ ಅನುರ್ಜಿತಗೊಳಿಸುವ ಕುರಿತಂತೆ ವಿಚಾರಣಾ ಪೀಠಕ್ಕೆ ಸಲಹೆ ನೀಡಲಿದ್ದಾರೆ.

ಕೆಲ ನಾಗರಿಕರು, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಮನವಿ ಅರ್ಜಿಯನ್ನು ತಿರಸ್ಕರಿಸಿತು.
ಮತ್ತಷ್ಟು
ತುಟಿಬಿಚ್ಚದೆ ಬಿಜೆಪಿ ಮೌನ
ಪುರುಷರ ರಾಷ್ಟ್ರೀಯ ಆಯೋಗಕ್ಕೆ ಒತ್ತಾಯ
ಲಡಕ್‌ನಲ್ಲಿ ಮಿಲಿಟರಿ ಅಭ್ಯಾಸಕ್ಕೆ ಖಂಡನೆ
ಗೋವಾದಲ್ಲಿ ರೈಲ್ವೆ ಸುರಕ್ಷತೆ ಸಮಾವೇಶ
ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಪ್ರಯತ್ನ
ಕೇಂದ್ರದ ಇಬ್ಬಗೆಯ ನೀತಿ:ರಾಜನಾಥ್