ಡಿಎಂಕೆ ಸರ್ಕಾರದ ವಜಾಕ್ಕೆ ಒತ್ತಾಯಿಸಿರುವ ಬಿಜೆಪಿ ಪಕ್ಷವನ್ನು ತಮಿಳುನಾಡು ಮುಖ್ಯಮಂತ್ರಿ ಎಂ, ಕರುಣಾನಿಧಿ ಕಟುವಾಗಿ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಚೆನ್ನೈನಲ್ಲಿ ಬಿಜೆಪಿ ಮುಖ್ಯಕಚೇರಿ ಮೇಲೆ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿದ್ದಾರೆಂದು ತಿಳಿಸಿದರು.
ಅ.1ರಂದು ರಾಜ್ಯವ್ಯಾಪಿ ಬಂದ್ ಉಲ್ಲೇಖಿಸಿ ಮಾತನಾಡುತ್ತಾ, ಬಂದ್ ಪ್ರಕಟಣೆಯನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದರು.ಸರ್ವ ಪಕ್ಷಗಳ ಸಭೆಯಲ್ಲಿ ಬಂದ್ ಕರೆ ನೀಡಲು ನಿರ್ಧರಿಸಲಾಯಿತೆಂದು ಅವರು ಹೇಳಿದರು.
ಆಡಳಿತರೂಢ ಡಿಎಂಕೆ ಸಮ್ಮಿಶ್ರ ಕೂಟದ ಪಾಲುದಾರ ಪಕ್ಷ ಎಂದು ಹೇಳಿದ ಅವರು, ಬಂದನ್ನು ಶಾಂತಿಯುತ ರೀತಿಯಲ್ಲಿ ನಡೆಸಲಾಗುವುದು ಎಂದೂ ಅವರು ನುಡಿದರು.
|