ಹೆಚ್ಐವಿ ಪೀಡಿತ ಮಹಳೆಯ ವಶಕ್ಕೆ ಆಕೆಯ 9 ವರ್ಷ ಪ್ರಾಯದ ಮಗಳನ್ನು ನೀಡಲು ಕೆಳಕೋರ್ಟೊಂದು ನಿರಾಕರಿಸುವ ಮೂಲಕ, ಹೆಚ್‌ಐವಿ ಪಾಸಿಟಿವ್ ಮಹಿಳೆಯು ತನ್ನ ಮಕ್ಕಳ ಪೋಷಣೆ ಮಾಡಲು ಶಕ್ತಳೇ ಎಂಬ ಪ್ರಶ್ನೆ ಉದ್ಭವಿಸಿದೆ.
ತಾಯಿಯ ಬಳಿ ಮಗಳನ್ನು ಇರಿಸುವ ಬದಲಿಗೆ ಆಕೆಯ ಅಜ್ಜಅಜ್ಜಿಯರಲ್ಲಿ ಮಗಳನ್ನು ಇರಿಸಬಹುದೆಂದು ಆಳ್ವಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದೆ. 2003ರಲ್ಲಿ ತಮ್ಮ ಪತ್ನಿ ನಿಧನರಾದ ಬಳಿಕ ವಿಧವೆ ಪತ್ನಿ ಶೀಲಾ ಪತಿಯ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ತಾಯಿಯನ್ನು ಸ್ವಾಭಾವಿಕ ಪೋಷಕಳು ಎಂಬ ಆಧಾರದ ಮೇಲೆ ಆಕೆಯನ್ನು ಬೆಂಬಲಿಸಿ ನಾಗರಿಕ ಹಕ್ಕು ಮತ್ತು ಎಚ್‌ಐವಿ ಸಕಾರಾತ್ಮಕ ಮಹಿಳೆಯರ ಜಾಲದ ಸಂಘಟನೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ತಮ್ಮ ಪತಿ ಸೇನಾಯೋಧನಾಗಿದ್ದು, 2003ರಲ್ಲಿ ಏಡ್ಸ್‌ನಿಂದ ಸತ್ತರು, 1995ರಲ್ಲಿ ತನಗೆ ಮದುವೆಯಾಯಿತು ಮತ್ತು 1997ರಲ್ಲಿ ಎಚ್‌ಐವಿ ಪೀಡಿತಳಾದೆ ಎಂದು ಶೀಲಾ ಹೇಳಿದರು. ತಮ್ಮ ಪತಿಯಿಂದ ಹೆಚ್ಐವಿ ಸೋಂಕು ತಗುಲಿತೆಂದು ಅವರು ಹೇಳಿದ್ದಾರೆ.
ಶೀಲಾ ಮತ್ತು ಆಕೆಯ ಮಗಳು ತಮ್ಮ ಪತಿಯ ಕುಟುಂಬದ ಜತೆ ವಾಸ ಮುಂದುವರಿಸಿದರು. ಆದರೆ ಸೇನೆಯಿಂದ ಸಿಕ್ಕಿದ 4 ಲಕ್ಷ ರೂ. ಪರಿಹಾರವನ್ನು ಕಬಳಿಸಲು ಆಕೆಯ ಅತ್ತೆಮನೆಯವರು ಯತ್ನಿಸಿದಾಗ ಸಂಬಂಧ ಹಳಸಿತು.
ನನ್ನ ಅತ್ತೆಮನೆಯವರು ಜಮೀನು ಖರೀದಿಗೆ ಎಲ್ಲಾ ಹಣ ನೀಡಬೇಕೆಂದು ಒತ್ತಾಯಿಸಿದರು. ನಾನು ಒಪ್ಪದಿದ್ದಾಗ ನನ್ನನ್ನು ಹೊರಕ್ಕೆಹಾಕಿ ಮಗಳನ್ನು ತಮ್ಮ ಜತೆ ಇಟ್ಟುಕೊಂಡರೆಂದು ಅವರು ಹೇಳುತ್ತಾರೆ.
ಶೀಲಾ ಈಗ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ತನ್ನ ಪತಿಯ ಕುಟುಂಬ ಸ್ವೀಕರಿಸಿದ ಪರಿಹಾರ ಹಣ ಮತ್ತು ವಿವಾಹದಲ್ಲಿ ನೀಡಿದ್ದ ವರದಕ್ಷಿಣೆ ಹಣ ಹಿಂತಿರುಗಿಸಬೇಕೆಂದು ಒತ್ತಾಯಿಸಿದ್ದಾರೆ.
|