ಬಿಎಂಡಬ್ಲು ಕಾರ್ ಹತ್ಯಾಕಾಂಡದ ಪ್ರಮುಖ ಸಾಕ್ಷಿ ಸುನಿಲ್ ಕುಲಕರ್ಣಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿ, ಟಿ ವಿ ಚಾನೆಲ್‌ವೊಂದು ಮಾಡಿದ ತನಿಖಾ ವರದಿಯಲ್ಲಿ ಸಿಲುಕಿಕೊಂಡಿರುವ ಹಿರಿಯ ನ್ಯಾಯವಾದಿಗಳಾದ ಆರ್ ಕೆ ಆನಂದ್ ಮತ್ತು ಐ. ಯು. ಖಾನ್ ವಿರುದ್ಧ ಮಾಡಲಾಗಿರುವ ಸಾಕ್ಷಿ ನಾಶದ ಪ್ರಕರಣದ ವಿಚಾರಣೆ ನಡೆದು ತನಿಖಾ ವರದಿಯಲ್ಲಿ ದಾಖಲಿಸಿಕೊಳ್ಳಲಾಗಿದ್ದ, ಅಸಲಿ ಸಿಡಿಯನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು.
ಎನ್‌ಡಿಟಿವಿ ಚಾನೆಲ್ ಮಾಡಿದ್ದ ತನಿಖಾ ವರದಿಯ ಸಿಡಿಯಲ್ಲಿ ಕೆಲ ಲೋಪಗಳು ಇವೆ ಎಂದು ಆಪಾದಿತ ನ್ಯಾಯವಾದಿ ಅಕ್ಷೇಪಣೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿಡಿಯನ್ನು ನ್ಯಾಯಾಲಯದಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಮಾತ್ರ ಪ್ರದರ್ಶಿಸಲಾಯಿತು. ನ್ಯಾಯಮೂರ್ತಿ ಮನ್‌ಮೋಹನ್ ಸರಿನ್ ಮತ್ತು ಎಸ್. ಕೆ ಕೃಷ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂದು ಮುಂಜಾನೆ ಐ. ಯು. ಖಾನ್ ಪರ ವಾದಿಸುತ್ತಿರುವ ನ್ಯಾಯವಾದಿ, ನ್ಯಾಯಾಲಯದ ಜಂಟಿ ನೋಂದಣಿ ಅಧಿಕಾರಿ, ನ್ಯಾಯಾಂಗ ಸಲಹೆಗಾರ ಮತ್ತು ಎನ್‌ಡಿಟಿವಿ ಪ್ರತಿನಿಧಿಗಳಿಗೆ ಮಾತ್ರ ತನಿಖಾ ವರದಿಯ ಸಿಡಿ ಪ್ರದರ್ಶಿಸಲಾಯಿತು.
ತನಿಖಾ ವರದಿಯ ಸಿಡಿ ವಿಕ್ಷೀಸಿದ ನಂತರ ತಾನು, ತನ್ನ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಉತ್ತರಿಸುತ್ತೇನೆ ಎಂದು ಆಪಾದಿತ ನ್ಯಾಯವಾದಿ ಖಾನ್, ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಸದರಿ ಮನವಿಯನ್ನು ಪುರಸ್ಕರಿಸಿದ ವಿಚಾರಣಾ ಪೀಠ ಅವರ ಪರ ವಾದಿಸುತ್ತಿರುವ ನ್ಯಾಯವಾದಿಗೆ ಸಿಡಿ ವಿಕ್ಷಣೆಯ ಅವಕಾಶ ನೀಡಿತು.
ತನಿಖಾ ವರದಿಯಲ್ಲಿ ಸರಕಾರದ ಪರ ವಾದಿಸುತ್ತಿರುವ ನ್ಯಾಯವಾದಿ ಐ.ಯು ಖಾನ್ ಮತ್ತು ಆರೋಪಿ ಪರ ವಾದಿಸುತ್ತಿರುವ ನ್ಯಾಯವಾದಿ ಆರ್ ಕೆ ಆನಂದ್ ಅವರು, ಪ್ರಕರಣದ ಪ್ರಮುಖ ಆರೋಪಿ ಸಂಜೀವ ನಂದಾ ಪರ ನ್ಯಾಯಾಲಯದಲ್ಲಿ ಹೇಳಿಕೆ ನೀಡಬೇಕು ಎಂದು ಪ್ರಕರಣದ ಪ್ರಮುಖ ಸಾಕ್ಷಿ ಸಂಜೀವ ಕುಲಕರ್ಣಿ ಅವರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿರುವುದನ್ನು ಎನ್‌ಡಿಟಿವಿ ತನ್ನ ಕ್ಷಿಪ್ರ ತನಿಖಾ ವರದಿಯಲ್ಲಿ ಪ್ರಸಾರ ಮಾಡಿತ್ತು.
ಪರ ಮತ್ತು ಆರೋಪಿ ಪರ ವಕೀಲರುಗಳ ನಡುವಿನ ಅನೈತಿಕ ವ್ಯವಹಾರವನ್ನು ಬಯಲಿಗೆ ಬಂದ ನಂತರ ನ್ಯಾಯಾಲಯವು ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ದಾಖಲು ಮಾಡಿ ಆಪಾದಿತರಿಗೆ ನೋಟಿಸ್ ಜಾರಿ ಮಾಡಿತ್ತು.
|