ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದದಲ್ಲಿ ರಾಜಿ ಪ್ರಶ್ನೆ ಇಲ್ಲ: ಬಸು
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಎಡಪಕ್ಷಗಳಲ್ಲಿ ಕೆಲ ನಾಯಕರು ಕಾಂಗ್ರೆಸ್ ನೇತೃತ್ವದ ಸರಕಾರದೊಂದಿಗೆ ಅಣು ಒಪ್ಪಂದಂತೆ ಕುರಿತಂತೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ಎಡಪಕ್ಷಗಳು ರಾಜಿಗೆ ಸಿದ್ದವಿಲ್ಲ ಎಂದು ಪಕ್ಷದ ಹಿರಿಯ ನಾಯಕ ಜ್ಯೋತಿ ಬಸು ಹೇಳಿದ್ದಾರೆ.

ಪಕ್ಷದ ಕೇಂದ್ರೀಯ ಸಮಿತಿ ಸಭೆಗೆ ಆಗಮಿಸಿದ್ದ ಅವರು, ಎಡ ಪಕ್ಷಗಳು ಬಿಗಿ ಕ್ರಮ ತೆಗೆದುಕೊಳ್ಳಲಿವೆ ಎಂದು ಕೇಳಿದ ಪ್ರಶ್ನೆಗೆ. ಅಣು ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ನಾವು ರಾಜಿಗೆ ಸಿದ್ದವಿಲ್ಲ. ಕಾಂಗ್ರೆಸ್ ಈ ನಿಟ್ಟಿನಲ್ಲಿ ಎನು ಮಾಡುತ್ತದೆ ಎನ್ನುವುದನ್ನು ಕಾಯ್ದು ನೋಡೊಣ. ನಂತರ ಮುಂದಿನ ಕ್ರಮದ ಕುರಿತು ಸಿಪಿಐ ವಿಚಾರ ಮಾಡಲಿದೆ ಎಂದು ಹೇಳಿದರು.


ಸಿಪಿಐನ ಕೇಂದ್ರಿಯ ಸಮಿತಿ ನಾಯಕರು ತಳೆದಿರುವ ಬಿಗಿ ನಿಲುವಿಗೆ ಪಶ್ಟಿಮ ಬಂಗಾಲದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಯನ್ನು ಸಿಪಿಐನ ಕೇಂದ್ರಿಯ ಸಮಿತಿ ಅಲ್ಲಗಳೆದಿದೆ.

ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಮತ್ತು ಎಡಪಕ್ಷಗಳ ನಡುವೆ ಸಂಯೋಜಕರಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಕಾರ್ಯನಿರ್ವಹಿಸುತ್ತಿದ್ದು, ಬಸು ಅವರೊಂದಿಗೆ ಟೆಲಿಫೋನ್ ಮೂಲಕ ಮಾತನಾಡಿದ್ದಾರೆ. ಅಕ್ಟೋಬರ್ ಐದರಂದು ಕಾಂಗ್ರೆಸ್, ಎಡ ಪಕ್ಷಗಳ ನಡುವೆ ಸಮನ್ವಯ ಸಭೆ ನಡೆಯಲಿದೆ.
ಮತ್ತಷ್ಟು
ಸಾಕ್ಷಿ ತಿರುಚುವ ಪ್ರಯತ್ನದಲ್ಲಿ ಸಿಕ್ಕಿಕೊಂಡ ಖಾನ್
ಅಸಭ್ಯ ಸಂಸದರ ವಾಪಸ್ಸಿಗೆ ಸೂಕ್ತ ಸಮಯ
ಹೆಚ್‌ಐವಿ ಮಹಿಳೆಗೆ ಮಗಳ ಹಕ್ಕೂ ಇಲ್ಲ
ಬಿಜೆಪಿ ವಿರುದ್ಧ ಕರುಣಾನಿಧಿ ಟೀಕೆ
ಕಡುಬಡವರಿಗೆ 2 ರೂ. ದರದಲ್ಲಿ ಅಕ್ಕಿಗೆ ಒತ್ತಾಯ
ಮಿಡ್ ಡೆ ಪತ್ರಕರ್ತರಿಗೆ ಜಾಮೀನು