ಸೆಪ್ಟಂಬರ್ 22ರಿಂದ 28ರವರೆಗಿನ ಒಂದು ವಾರದ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ ಶನಿವಾರ ಭೊಪಾಲ್ ಮದ್ಯಂತರ ಲೋಕಸಭೆಯನ್ನು ಗಮನದಲ್ಲಿಟ್ಟುಕೊಂಡಿರುವ ಭಾರತೀಯ ಜನತಾ ಪಕ್ಷ ತನ್ನ ಪಕ್ಷದ ಪದಾದಿಕಾರಿಗಳ ಸ್ಥಾನಗಳಲ್ಲಿ ಪ್ರತಿಶತ 33ರಷ್ಟು ಸ್ಥಾನವನ್ನು ಭಾರತೀಯ ಜನತಾ ಪಕ್ಷ ಕಾಯ್ದಿರಿಸುವ ನಿರ್ಧಾರಕ್ಕೆ ಪಕ್ಷಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಒಪ್ಪಿಗೆ ನೀಡುವ ಮೂಲಕ ಐತಿಹಾಸಿಕ ಕ್ರಮಕ್ಕೆ ಮುಂದಾಯಿತು.
ನವದೆಹಲಿ ರಕ್ಷಣಾ ಇಲಾಖೆಯಲ್ಲಿನ ಬೃಷ್ಟಾಚಾರ ಮತ್ತೇ ಚರ್ಚೆಗೆ ಬರುವ ರೀತಿಯಲ್ಲಿ ರಾ (RAW) ಅಧಿಕಾರಿ ಬರೆದ ಪುಸ್ತಕವನ್ನು ಪ್ರಕಟಿಸಿದ ಮಾನಸ ಪಬ್ಲಿಕೆಷನ್ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಪರೀಶಿಲನೆ ನಡೆಸಿದರು.
ನವದೆಹಲಿ ಮಿಡ್ ಪತ್ರಿಕೆಯ ನಾಲ್ವರು ಪತ್ರಕರ್ತರಿಗೆ ದೆಹಲಿ ಉಚ್ಚನ್ಯಾಯಾಲಯ ವಿಧಿಸಿದ ನಾಲ್ಕು ತಿಂಗಳ ಶಿಕ್ಷೆಯ ವಿರುದ್ಧ ಪತ್ರಕರ್ತರು ಕಳವಳ ವ್ಯಕ್ತಪಡಿಸಿದ್ದು ಅಲ್ಲದೇ ಸ್ವತಂತ್ರ ವಿಚಾರಣೆ ಆಯೋಗವನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ರವಿವಾರ ನವದೆಹಲಿ ಕಳೆದ ಎರಡು ತಿಂಗಳಿನಿಂದ ನಡೆದ ಇಂಡಿಯನ್ ಐಡೊಲ್ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಲದ ಪೊಲೀಸ್ ಪೆದೆ ಪ್ರಶಾಂತ್ ತಮಂಗ್ ತನ್ನ ಹತ್ತಿರದ ಪ್ರತಿಸ್ಪರ್ಧಿ ಅಮಿತ್ ಪಾಲ್‌ರನ್ನು ಸೋಲಿಸಿದರು.
ನವದೆಹಲಿ ಮೂವರು ಜಪಾನಿ ಮಹಿಳೆಯರು ತಮ್ಮ ಮೇಲೆ ಬೇರೆ ಬೇರೆ ಸ್ಥಳಗಳಲ್ಲಿ ಮೂರು ದಿನಗಳ ಕಾಲ ಕೂಡಿಟ್ಟು ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿದರು.
ಪಾಟ್ನಾ/ ಪಲಾಮೌ ರೈಲ್ವೆ ಹಳಿಯ ಬಳಿ ಸಂಭವಿಸಿದ ಸ್ಫೋಟಕ್ಕೆ ಒರ್ವ ಪೊಲೀಸ್ ಸಿಬ್ಬಂದಿ ಸಹಿತ ಮೂವರು ಸಾವನ್ನಪ್ಪಿದರು. ಸಿಪಿಐ (ಮಾವೊ) ಬಣ ಕರೆದಿದ್ದ 24 ಗಂಟೆಗಳ ಕಾಲದ ಬಂದ್ ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತ
ನವದೆಹಲಿ ರಾಹುಲ್ ಗಾಂಧಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಎಂದು ನೇಮಕ ಅದ್ಯಕ್ಷ ಪದವಿ ಸೋನಿಯಾ ಕೈಗೆ, ಪರಿಣಾಮ ಪೂರ್ಣ ಆಡಳಿತ ಗಾಂಧಿ ಮನೆತನದ ಕೈಯಲ್ಲಿ. ಮೂವರು ಕಿರಿಯ ಕೇಂದ್ರೀಯ ಮಂತ್ರಿಗಳು ಎಐಸಿಸಿ ಕಾರ್ಯಕಾರಿಣಿಗೆ ಸೆರ್ಪಡೆ. ಮಂಗಳವಾರ ಚೆನ್ನೈ ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜನಾ ಕೃಷ್ಣಮೂರ್ತಿ ನಿದನ. ನವದೆಹಲಿ ಮದ್ಯಂತರ ಚುನಾವಣೆ ಸಾಧ್ಯತೆ ಕಾಂಗ್ರೆಸ್ ಪಕ್ಷವು ಉದ್ಯೋಗ ಖಾತ್ರಿ ಯೋಜನೆಯ ವಿಸ್ತಾರಕ್ಕೆ ಆದೇಶ ನೀಡಿವ ಕುರಿತು ಮನ್‌ಮೋಹನ್ ಸಿಂಗ ಗಂಭೀರ ಚಿಂತನೆ.
ಗುರುವಾರ ಬೆಂಗಳೂರು ಕರ್ನಾಟಕ ರಾಜಕೀಯದಲ್ಲಿ ತಲ್ಲಣ, ಜೆಡಿ ಎಸ್ ಮತ್ತು ಬಿಜೆಪಿ ನಡುವೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮುರಿದು ಬಿದ್ದ ಮಾತುಕತೆ.
ಶುಕ್ರವಾರ ಸಿಲಿಗುರಿ ಇಂಡಿಯನ್ ಐಡೊಲ್ ಪ್ರಶಾಂತ್ ತಮಾಂಗ್ ಅಭಿಮಾನಿಗಳು ಮತ್ತು ಸ್ಥಳಿಯರ ನಡುವೆ ಚಕಮಕಿ, ಕಾನೂನು ಸುರಕ್ಷತೆ ಕಾಪಾಡಲು ಮಿಲಿಟರಿಗೆ ಆಹ್ವಾನ. ನವೆದೆಹಲಿ ಉದ್ಯೋಗ ಖಾತ್ರಿ ಯೋಜನೆಗೆ ಯುಪಿಎ ಸರಕಾರದ ಅಸ್ತು. ನವೆದೆಹಲಿ ಸಬರವಾಲ್ ವಿರುದ್ಧ ಲೇಖನ ಬರೆದು ಪ್ರಕಟಿಸಿದ ನಾಲ್ವರು ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು. ಹೈದರಾಬಾದ್ ಆಂದ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಅವರಿಂದ ಕೇಂದ್ರಕ್ಕೆ ಎರಡು ರೂ ಕೆಜಿ ಅಕ್ಕಿಯ ಪ್ರಸ್ತಾವಣೆ.
|