ಭೂಗತ ಲೋಕದ ಪಾತಕಿ ಛೋಟಾ ಶಕೀಲ್ ಸಹಾಯಕ ಇಕ್ಬಾಲ್ ಅತ್ತರ್ವಾಲ್ ಬಂಧನದ ನಂತರ ನಟ ಸೊಹೈಲ್ ಖಾನ್ ಅವರನ್ನು ಶನಿವಾರದಂದು ಮುಂಬೈ ಕ್ರೈಂ ಬ್ರಾಂಚ್, ವಿಚಾರಣೆಗಾಗಿ ಕರೆಸಿಕೊಂಡಿದ್ದು, ಭೂಗತ ಲೋಕ ಮತ್ತು ಚಿತ್ರರಂಗದ ನಡುವೆ ಇರುವೆ ಸಂಬಂಧದ ಸುಳಿಯನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ.
ಕೃಷ್ಣ ಮೃಗ ಬೇಟೆಯಾಡಿ ವಿವಾದಕ್ಕೊಳಗಾದ ನಟ ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್, ಸೊಹೈಲ್ ಖಾನ್ ಪ್ರಾಡೆಕ್ಷನ್ ಎಂಬ ಚಲನಚಿತ್ರ ತಯಾರಿಕೆ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅಲ್ಲದೆ ಭಾರತ ಮತ್ತು ವಿದೇಶಿಗಳಲ್ಲಿ ಬಾಲಿವುಡ್ ಪ್ರದರ್ಶನ ಮತ್ತು ಸಂಗೀತ ಕಛೇರಿಗಳನ್ನು ಆಯೋಜಿಸುವ ಘಟನಾ ವ್ಯವಸ್ಥಾಪನೆಯ ಅಂಗವಾಗಿದ್ದಾರೆ.
ಸೊಹೈಲ್ ಅವರನ್ನು ಕ್ರೈಂ ಬ್ರಾಂಚ್‌ನ ಎರಡನೇ ಘಟದಲ್ಲಿ ಪೊಲೀಸ್ ಅಧಿಕಾರಿಗಳು ಅವರ ಹೇಳಿಕೆಗಳನ್ನು ದಾಖಲಿಸಲಿದ್ದಾರೆ.ಅತ್ತರ್ವಾಲ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ನಾವು ಸೊಹೈಲ್ ಅವರನ್ನು ಶನಿವಾರದಂದು ಕರೆಸಿದ್ದೇವೆ. ಆದರೆ ಈ ಕುರಿತು ಮಾಹಿತಿ ನೀಡಲಿಕ್ಕೆ ಸಾಧ್ಯವಿಲ್ಲ ಎಂದು ಕ್ರೈಂ ಬ್ರಾಂಚ್ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರು ತಿಳಿಸಿದ್ದಾರೆ.
ಈ ತಿಂಗಳ ಆದಿಯಲ್ಲಿ ದುಬೈಯಿಂದ ಮುಂಬೈಗೆ ಬಂದಿಳಿದ ಪಾತಕ ಜಗತ್ತಿನ ಗ್ಯಾಂಗ್‌ಸ್ಟರ್ ಚೋಟಾ ಶಕೀಲ್ ಅವರ ಸಹಾಯಕ ಅತ್ತರ್ವಾಲ ಅವರನ್ನು ಪೋಲೀಸರು ಬಂಧಿಸಿದ್ದರು. ಅಲ್ಲದೆ ಯಎಇಯಲ್ಲಿ ಸ್ಟೇಜ್ ಶೋವೊಂದರಲ್ಲಿ ಪಾಲ್ಗೊಂಡ ಅನೇಕ ಬಾಲಿವುಡ್ ತಾರೆಗಳನ್ನು ವಿಚಾರಣೆಗೆ ಗುರಿಪಡಿಸಲಿದ್ದಾರೆ ಎಂದು ಪೋಲೀಸರು ಹೇಳಿದ್ದಾರೆ.
1990ರಿಂದ ಯುಎಇಯಲ್ಲಿ ಒಟ್ಟು 32 ಪ್ರದರ್ಶನಗಳು ನಡೆದಿದ್ದು, ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್ ಅವರ ಆದೇಶದಂತೆ ಹಿಂದಿ ಚಿತ್ರರಂಗದ ಅನೇಕ ತಾರೆಗಳು ಭಾಗವಹಿಸಿ ಪ್ರದರ್ಶನ ನೀಡಿದ್ದರು. ಅನೇಕ ಪ್ರದರ್ಶನವನ್ನು ಅತ್ತರ್ವಾಲ ಆಡಳಿತದ ಘಟನಾ ವ್ಯವಸ್ಥಪನಾ ಸಂಸ್ಥೆ ಶೋ ಬ್ಲಿಟ್ಜ್ ಆಯೋಜಿಸಿತ್ತು.
ಪ್ರದರ್ಶನದಲ್ಲಿ ಪಾಲ್ಗೊಂಡ ಕೆಲವು ತಾರೆಯರ ಹೆಸರನ್ನು ಅತ್ತರ್ವಾಲ್ ಅವರು ವಿಚಾರಣೆ ವೇಳೆ ಹೊರಗೆಡವಿದ್ದನು.
|