ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಮಿಳುನಾಡು ಬಂದ್‌ಗೆ ತಡೆಯಾಜ್ಞೆ: ಅಘೋಷಿತ ಬಂದ್
ಸೇತು ಸಮುದ್ರಂ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ, ಇಂದು (ಅಕ್ಟೋಬರ್ 1) ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟ ಕರೆ ನೀಡಿದ್ದ ತಮಿಳುನಾಡು ಬಂದ್‌ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ರದ್ದುಗೊಂಡಿದೆ.

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ ಬಂದ್‌ಗೆ ಕೊನೆಯ ಕ್ಷಣದಲ್ಲಿ ತಡೆಯಾಜ್ಞೆ ತರುವಲ್ಲಿ ಎಐಎಡಿಎಮ್‌ಕೆ ಯಶಸ್ವಿಯಾಗಿದ್ದು, ರಾಜಕೀಯ ಜಿದ್ದಾಜಿದ್ದಿಯಲ್ಲಿ ಕರುಣಾನಿಧಿ ಮುಖಂಡತ್ವದ ಡಿಎಮ್‌ಕೆ ಪಕ್ಷ ತೀವ್ರ ಮುಖ ಭಂಗ ಅನುಭವಿಸಿದೆ.

ಈ ನಡುವೆ ಬಂದ್‌ಗೆ ತಡೆಯಾಜ್ಞೆ ತಂದಿರುವ ಕ್ರಮದ ಕುರಿತು ಪ್ರತಿಕ್ರಸಿರುವ ಕರುಣಾನಿಧಿ, "ಯುಪಿಎ ಒಕ್ಕೂಟದ ಮುಖಂಡರೊಂದಿಗೆ ಚರ್ಚಿಸಿದ ನಂತರ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರ್ಧರಿಸಿಲಾಗಿದ್ದು, ಸಾಂಕೇತಿಕವಾಗಿ ಶಾಸಕರ ಕಚೇರಿ ಎದುರು ಉಪವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.

ನಿನ್ನೆ ಸರ್ವೋಚ್ಚ ನ್ಯಾಯಾಲಯಕ್ಕೆ ರಜಾ ಅವಧಿಯ ವಿಶೇಷ ಮನವಿಯನ್ನು ಸಲ್ಲಿಸಿದ ಎಐಡಿಎಂಕೆ ಪಕ್ಷ, ಈಗಾಗಲೇ ಆಪೆಕ್ಸ್ ನ್ಯಾಯಾಲಯದಲ್ಲಿ ರಾಮಸೇತು ವಿವಾದ ವಿಚಾರಣೆಯಲ್ಲಿರುವದರಿಂದ ಬಂದ್‌ ನಡೆಸುವುದು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ವಾದಿಸಿತ್ತು.

ಈ ಮೊದಲು ಬಂದ್ ನಡೆಸದಂತೆ ನಿರ್ದೇಶನ ನೀಡುವಂತೆ ಜಯಲಲಿತಾ ನೇತೃತ್ವದ ಎಐಡಿಎಂಕೆ ಪಕ್ಷವು ಮದ್ರಾಸ್ ಹೈಕೊರ್ಟಿನಲ್ಲಿ ಮನವಿ ಸಲ್ಲಿಸಿತ್ತು. ಆದರೆ, ಬಂದ್‌ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು.

ಹೈ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎಐಡಿಎಂಕೆ ಪಕ್ಷ ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸುಪ್ರಿಮ್ ಕೋರ್ಟ್ ರವಿವಾರವೇ ವಿಚಾರಣೆ ನಡೆಸಿ ಬಂದ್ ನಡೆಸದಂತೆ ಆದೇಶ ನೀಡಿದೆ.

ಬಸ್ ಸಂಚಾರ ಸ್ಥಗಿತ:
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಬಂದ್ ನಡೆಸುವುದು ರದ್ದುಗೊಂಡಿದ್ದರೂ, ಸಂಜೆಯ ವರೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ರೈಲ್ವೆ ಸಂಚಾರ ವ್ಯವಸ್ಥೆ ಭಾಗಶಃ ಭಾಗ ಚಲನೆಯಲ್ಲಿರುತ್ತದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಟಾಕ್ಸಿ ಹಾಗೂ ಆಟೋರಿಕ್ಷಾಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ತಮಿಳು ನಾಡು ಬಂದ್ ಇಲ್ಲ ಸುಪ್ರೀಂ ಕೋರ್ಟ್ ಆದೇಶ
ಮುಂಬೈ ಅಫರಾಧ ವಿಭಾಗದಿಂದ ನಟ ಸೋಹೈಲ್ ವಿಚಾರಣೆ
ವಾರದ ರಾಷ್ಟ್ರ ರಾಜಕೀಯ ಪರದೆ
ಸಬರವಾಲ್ ವಿರುದ್ಧ ವಿಚಾರಣೆಯಾಗಲಿ
ಅಣು ಒಪ್ಪಂದದಲ್ಲಿ ರಾಜಿ ಪ್ರಶ್ನೆ ಇಲ್ಲ: ಬಸು
ಸಾಕ್ಷಿ ತಿರುಚುವ ಪ್ರಯತ್ನದಲ್ಲಿ ಸಿಕ್ಕಿಕೊಂಡ ಖಾನ್