ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಮಿಳುನಾಡು ಅಕ್ಷರಶಃ ಬಂದ್
PTI
ಸೇತುಸಮುದ್ರಂ ವಿಷಯದ ಬಗ್ಗೆ ಬಂದ್ ನಡೆಸಬಾರದೆಂಬ ಸುಪ್ರೀಂಕೋರ್ಟ್ ಆದೇಶದ ನಡುವೆಯೂ ರಾಜ್ಯದಲ್ಲಿ ಸೋಮವಾರ ಬಂದ್‌ ರೀತಿಯ ಪರಿಸ್ಥಿತಿ ನೆಲೆಸಿತ್ತು. ಅಂಗಡಿ. ಮುಂಗಟ್ಟುಗಳು ಮುಚ್ಚಿದ್ದವು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಆಟೋರಿಕ್ಷಾಗಳ ಸಂಚಾರವಿರಲಿಲ್ಲ.

ಬಹುತೇಕ ಶಿಕ್ಷಣ ಸಂಸ್ಥೆಗಳು ಬಂದ್ ಆಗಿದ್ದವು. ಬ್ಯಾಂಕ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳ ಸಿಬ್ಬಂದಿಗೆ ಬಸ್ ಸೌಲಭ್ಯವಿಲ್ಲದ ಕಾರಣ ಕೆಲವೇ ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸಿದರು. ದಕ್ಷಿಣ ರೈಲ್ವೆ ಎಂದಿನಂತೆ ಕಾರ್ಯನಿರ್ವಹಿಸಿತು.

ಸಬರ್ಬನ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವಿತ್ತು. ಇಂಡಿಯನ್ ಏರ್‌ಲೈನ್ಸ್ ಮತ್ತಿತರ ವಿಮಾನ ಸಂಸ್ಥೆಗಳು ಕೆಲವು ವಿಮಾನಹಾರಾಟ ರದ್ದುಮಾಡಿದ್ದರಿಂದ ವಿಮಾನ ಸಂಚಾರಕ್ಕೆ ಅಡ್ಡಿಯಾಯಿತು.ಕಲ್ಲೆಸೆತದ ಕೆಲವು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಚಳವಳಿ ರಾಜ್ಯವ್ಯಾಪಿ ಶಾಂತಿಯುತವಾಗಿತ್ತು ಎಂದು ಪೊಲೀಸ್ ಮುಖ್ಯಕಚೇರಿಗೆ ಬಂದ ವರದಿಗಳು ತಿಳಿಸಿವೆ.

ತಂಜಾವೂರು ಜಿಲ್ಲೆಯ ಮನ್ನಾರ್‌ಕುಡಿಯಲ್ಲಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಘರ್ಷಣೆಗಿಳಿದ ಡಿಎಂಕೆ ಮತ್ತು ಎಐಎಡಿಎಂಕೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದರು.

ಕೆಲವು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವರದಿ ತಿಳಿಸಿದೆ. ಸಂಜೆಯ ನಂತರ ಬಸ್‌ಗಳು ಮತ್ತು ಆಟೋರಿಕ್ಷಾಗಳ ಸಂಚಾರ ಆರಂಭವಾಯಿತು.
ಮತ್ತಷ್ಟು
ತಮಿಳುನಾಡು ಬಂದ್‌ಗೆ ತಡೆಯಾಜ್ಞೆ: ಅಘೋಷಿತ ಬಂದ್
ತಮಿಳು ನಾಡು ಬಂದ್ ಇಲ್ಲ ಸುಪ್ರೀಂ ಕೋರ್ಟ್ ಆದೇಶ
ಮುಂಬೈ ಅಫರಾಧ ವಿಭಾಗದಿಂದ ನಟ ಸೋಹೈಲ್ ವಿಚಾರಣೆ
ವಾರದ ರಾಷ್ಟ್ರ ರಾಜಕೀಯ ಪರದೆ
ಸಬರವಾಲ್ ವಿರುದ್ಧ ವಿಚಾರಣೆಯಾಗಲಿ
ಅಣು ಒಪ್ಪಂದದಲ್ಲಿ ರಾಜಿ ಪ್ರಶ್ನೆ ಇಲ್ಲ: ಬಸು