ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಹಾತ್ಮ ಗಾಂಧಿಗೆ ಗೌರವಾರ್ಪಣೆ
ಅಹಿಂಸಾ ಪ್ರತಿಪಾದಕ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 138ನೇ ಜನ್ಮದಿನಾಚರಣೆಯಾದ ಮಂಗಳವಾರ ರಾಷ್ಟ್ರದ ಜನತೆ ಹೃತ್ಪೂರ್ವಕ ನಮನ ಸಲ್ಲಿಸಿತು. ಗಾಂಧಿ ಸಮಾಧಿ ಸ್ಥಳವಾದ ರಾಜ್‌ಘಾಟ್‌ನಲ್ಲಿ ಹಮ್ಮಿಕೊಳ್ಳಲಾದ ಅಂತರ ಧರ್ಮೀಯ ಪ್ರಾರ್ಥನೆಯಲ್ಲಿ ನಾಯಕರು, ಮಕ್ಕಳು ಯುವಜನರು ಮತ್ತು ಮಹಿಳೆಯರು ಗೌರವಾರ್ಪಣೆ ಸಲ್ಲಿಸಿದರು.

ವಿಶ್ವಸಂಸ್ಥೆ ಗಾಂಧಿ ಜನ್ಮದಿನವನ್ನು ಅಂತಾರಾಷ್ಯ್ರೀಯ ಅಹಿಂಸಾದಿನವಾಗಿ ಘೋಷಿಸಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ ಸಿಂಗ್, ಗೃಹಸಚಿವ ಶಿವರಾಜ್ ಪಾಟೀಲ್, ರಕ್ಷಣಾ ಸಚಿವ ಎ.ಕೆ. ಆಂಟೋನಿ ಮತ್ತಿತರರು ರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪುಷ್ಪಗುಚ್ಛವಿರಿಸಿ ಗೌರವ ಅರ್ಪಿಸಿದರು.

ಭಾರತೀಯ ಮೂಲದ ಅಮೆರಿಕದ ಬಾಹ್ಯಾಕಾಶಯಾನಿ ಸುನಿತಾ ವಿಲಿಯಮ್ಸ್ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪಗುಚ್ಛವರ್ಪಿಸಿ ಗೌರವ ಸಲ್ಲಿಸಿದರು.ಹಿಂದುಗಳು, ಜೈನರು, ಮುಸ್ಲಿಮರು, ಬೌದ್ಧರು, ಸಿಖ್ಖರು ತಮ್ಮ ಧರ್ಮಗ್ರಂಥಗಳನ್ನು ಪಠಣ ಮಾಡಿದರು. ಸಮಾಧಿಗೆ ಹೋಗುವ ಸ್ಥಳವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.
ಮತ್ತಷ್ಟು
ತಮಿಳುನಾಡಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ
ತಮಿಳುನಾಡು:ರಾಜ್ಯವ್ಯಾಪಿ ನಿರಶನ
ತಮಿಳುನಾಡು ಅಕ್ಷರಶಃ ಬಂದ್
ತಮಿಳುನಾಡು ಬಂದ್‌ಗೆ ತಡೆಯಾಜ್ಞೆ: ಅಘೋಷಿತ ಬಂದ್
ತಮಿಳು ನಾಡು ಬಂದ್ ಇಲ್ಲ ಸುಪ್ರೀಂ ಕೋರ್ಟ್ ಆದೇಶ
ಮುಂಬೈ ಅಫರಾಧ ವಿಭಾಗದಿಂದ ನಟ ಸೋಹೈಲ್ ವಿಚಾರಣೆ