ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅಧಿಕಾರ ಸೂತ್ರ ಹಿಡಿದಾಗಿನ ಪರಿಸ್ಥಿತಿ ಮರುಕಳಿಸುವ ಎಲ್ಲಾ ಲಕ್ಷಣಗಳೂ ಕಂಡಬರುತ್ತಿವೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗ ಬಿಜೆಪಿಯನ್ನು ದ್ವೇಷಿಸುತ್ತಿದ್ದ ದೇವೇಗೌಡರು ಪುತ್ರನ ಕ್ರಮಕ್ಕೆ ಮುನಿಸಿಕೊಂಡಿದ್ದರು. ನಂತರ ಎಲ್ಲವೂ ಸರಿಹೋಯಿತು. ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬಾರದು ಎಂದು ಬಿಗಿಪಟ್ಟು ಹಿಡಿದಿರುವ ಜೆಡಿಎಸ್ ವರಿಷ್ಠ ದೇವೇಗೌಡರ ಜತೆಗೆ ಘರ್ಷಣೆಯ ಹಾದಿಯಲ್ಲಿ ಕುಮಾರಸ್ವಾಮಿ ಅವರು ಸಾಗುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಣಕಾರರ ಅಭಿಪ್ರಾಯ. ವಚನ ನೀಡಿದಂತೆ ಅಧಿಕಾರ ಹಸ್ತಾಂತರಕ್ಕೆ ತಾವು ಮುಂದಾಗವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ.ಆದರೆ ಅಕ್ಟೌಬರ್ 3 ರಂದೇ ಅಧಿಕಾರ ಹಸ್ತಾಂತರ ಆಗಬೇಕೆಂದು ಡೆಡ್ಲೈನ್ ವಿಧಿಸುವುದು ಸರಿಯಲ್ಲ ಎನ್ನುವುದು ಕುಮಾರಸ್ವಾಮಿ ಯವರ ಮಂಗಳವಾರದ ಮಾತು.
ತಮ್ಮ ಪಕ್ಷದ ಶಾಸಕಾಂಗ ಸಭೆ ಮಂಗಳವಾರ ನಡೆಯಲಿದ್ದು, ನಂತರ ವಷ್ಟೇ ನಮ್ಮ ನಿಲುವು ಬಹಿರಂಗಪಡಿಸುವುದಾಗಿ ಉಪ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಬಿಜೆಪಿ ಸಚಿವರೆಲ್ಲರೂ ಯಡಿಯೂರಪ್ಪ ಅವರಿಗೆ ಮಂಗಳವಾರ ಸಚಿಜೆ ರಾಜೀನಾಮೆ ಪತ್ರಗಳನ್ನು ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
|