ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜಲಸಂಪನ್ಮೂಲ ನಿರ್ವಹಣೆ:ತಜ್ಞರ ಕಳವಳ
ಭಾರತದ ಜಲಸಂಪನ್ಮೂಲ ನಿರ್ವಹಣೆ ಕಾರ್ಯತಂತ್ರಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತಾಪಿತ ನದಿ ಜೋಡಣೆ ಯೋಜನೆಗಳಿಗೆ ವಿರಾಮ ಹಾಕಿ ಶುದ್ಧ ನೀರಿನ ಗರಿಷ್ಠ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುವಂತೆ ಅವರು ಸಲಹೆ ಮಾಡಿದ್ದಾರೆ. ಶುಭ್ರ ನೀರನ್ನು ವಿಶೇಷವಾಗಿ ಕೃಷಿಯಲ್ಲಿ ಭತ್ತದ ಬೆಳೆಗೆ ಬಳಸಲಾಗುತ್ತದೆ.

ಆದರೆ ಜಲಮೂಲದಿಂದ ಉತ್ಪಾದನೆಗೆ ಕನಿಷ್ಠ ನೀರನ್ನು ಅಳವಡಿಸುವ ಬಗ್ಗೆ ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ ಎಂದು ಖ್ಯಾತ ಜಲ ವಿಜ್ಞಾನಿ ಡಾ. ಬಿಕ್ಷಮ್ ಗುಜ್ಜಾ ತಿಳಿಸಿದರು.ಅಣೆಕಟ್ಟುಗಳ ನಿರ್ಮಾಣ ಮತ್ತು ನದಿಗಳ ಜೋಡಣೆ ಮೂಲಕ ಜಲ ಸಂಪನ್ಮೂಲ ನಿರ್ವಹಣೆ ಬಗ್ಗೆ ಗುಜ್ಜಾ ಅತೃಪ್ತಿ ವ್ಯಕ್ತಪಡಿಸಿದರು.

ಇಂತಹ ಯೋಜನೆಯಿಂದ ರಾಜ್ಯಗಳ ನಡುವೆ ಮತ್ತು ರಾಷ್ಟ್ರಗಳ ನಡುವೆ ಸಂಘರ್ಷಕ್ಕೆ ಎಡೆಯಾಗುತ್ತದೆ. ಏಕೆಂದರೆ ಶುದ್ಧ ನೀರಿನ ಬಿಕ್ಕಟ್ಟು ಮುಂದಿನ ಎರಡು ದಶಕಗಳಲ್ಲಿ ತೀವ್ರಗೊಳ್ಳುತ್ತದೆ ಹಾಗೂ ಪ್ರಮುಖ ಜಲಸಂಪನ್ಮೂಲಗಳ ಜೋಡಣೆ ಮತ್ತು ಅಣೆಕಟ್ಟುಗಳ ನಿರ್ಮಾಣದಿಂದ ನೀರಿನ ಹಂಚಿಕೆಯಲ್ಲಿ ಅಸಮಾನತೆ ಉಂಟಾಗುತ್ತದೆ ಎಂದು ಗುಜ್ಜಾ ಅಭಿಪ್ರಾಯಪಟ್ಟರು.

ಮೇಲ್ಮೈ ಜಲ ಮಾಲಿನ್ಯ ಮತ್ತು ಅಂತರ್ಜಲದಲ್ಲಿ ವಿಷಕಾರಿ, ಕಬ್ಬಿಣ ಮತ್ತು ಫ್ಲೋರೈಡ್ ಮಾಲಿನ್ಯದಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಅವರು, ಶುಭ್ರ ನೀರಿನ ದುರ್ಬಳಕೆ ಮತ್ತು ವ್ಯರ್ಥವು ಅಬಿವೃದ್ಧಿಶೀಲ ರಾಷ್ಟ್ರಗಳಿಗೆ ಗಂಬೀರ ಬೆದರಿಕೆಯೊಡ್ಡಿದೆ ಎಂದು ತಿಳಿಸಿದ ಅವರು ಭಾರತವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.
ಮತ್ತಷ್ಟು
ಎನ್‌ಆರ್ಇಜಿಪಿ ಪ್ರಾಮಾಣಿಕ ಅನುಷ್ಠಾನಕ್ಕೆ ಕರೆ
ಅಕ್ಟೋಬರ್ 10ರಿಂದ "ಕ್ವಿಟ್ ರಿಟೇಲ್" ಚಳುವಳಿ
ಹೆಣ್ಣುಮಕ್ಕಳನ್ನು ಉಳಿಸಿ ಅಭಿಯಾನ
ಅಪ್ಪ, ಮಗನ ನಡುವೆ ಪುನಃ ಸಂಘರ್ಷ
ಮಹಾತ್ಮ ಗಾಂಧಿಗೆ ಗೌರವಾರ್ಪಣೆ
ತಮಿಳುನಾಡಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ