ಮಲೇಶಿಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 300 ಜೀವಂತ ನಕ್ಷತ್ರ ಆಮೆಗಳನ್ನು ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಬುಧವಾರ ರಾತ್ರಿ ಆಮೆಗಳು ಪತ್ತೆಯಾದವು.
ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಅನ್ಸಾರಿ(19) ಎಂಬವನ ಚೀಲವನ್ನು ಅಧಿಕಾರಿಗಳು ಪರೀಕ್ಷಿಸಿದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3.5 ಲಕ್ಷ ರೂ. ಮೌಲ್ಯದ 333 ನಕ್ಷತ್ರ ಆಮೆಗಳು ಪತ್ತೆಯಾಗಿದ್ದು, ಅನ್ಸಾರಿಯನ್ನು ಬಂಧಿಸಿದರು.
ಅನ್ಸಾರಿ ರಾಮನಾಥಪುರಂ ಜಿಲ್ಲೆಯ ಇಲಯಾಂಕುಡಿಗೆ ಸೇರಿದವನು. ನಕ್ಷತ್ರ ಆಮೆಗಳು ಔಷಧೀಯ ಗುಣಗಳನ್ನು ಹೊಂದಿದ್ದು ಮಲೇಶಿಯ ಮತ್ತು ಈಶಾನ್ಯ ಏಷ್ಯ ರಾಷ್ಚ್ರಗಳಲ್ಲಿ ಒಳ್ಳೆಯ ಮಾರುಕಟ್ಟೆ ಮೌಲ್ಯ ಹೊಂದಿದೆ.
|