ಅ.1ರಂದು ಬಂದ್ ಆಚರಿಸಬಾರದೆಂಬ ಸುಪ್ರೀಂಕೋರ್ಟ್ ಆದೇಶವನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಕೇಂದ್ರ ಸಾರಿಗೆ ಸಚಿವ ಟಿ.ಆರ್.ಬಾಲು ಮತ್ತು ಇನ್ನೂ ನಾಲ್ವರು ಉಲ್ಲಂಘಿಸಿದ್ದಾರೆಂದು ಎಐಎಡಿಎಂಕೆ ಆರೋಪಿಸಿದ್ದು, ಅವರ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮ ಜರುಗಿಸುವಂತೆ ಕೋರಿ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ತಮಿಳುನಾಡು ಸಾರಿಗೆ ಸಚಿವ ಕೆ.ಎನ್. ನೆಹರು, ಮುಖ್ಯ ಕಾರ್ಯದರ್ಶಿ ಎಲ್.ಕೆ. ತ್ರಿಪಾಠಿ ಮತ್ತು ಡಿಜಿಪಿ ಪಿ. ರಾಜೇಂದ್ರನ್ ಮತ್ತು ಸಾರಿಗೆ ಸಚಿವ ದೇವೇಂದ್ರನಾಥ ಸಾರಂಗಿ ವಿರುದ್ಧ ಕೂಡ ನಿಂದನಾ ಕ್ರಮ ಜಾರಿಗೆ ಎಐಎಡಿಎಂಕೆ ಕೋರಿದೆ.
ಬಂದ್ ಆಚರಿಸಬಾರದೆಂಬ ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಅ.1ರಂದು ಬಂದ್ ಜಾರಿಮಾಡಲಾಯಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಬಂದ್ ಆಚರಿಸಿರುವುದು ಛಾಯಾಚಿತ್ರಗಳು, ವಿಡಿಯೋ ಚಿತ್ರಗಳು ಮತ್ತು ಸುದ್ದಿಪತ್ರಿಕೆಗಳ ವರದಿಗಳು ದೃಢಪಡಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
|