ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಾಧ್ಯಮ ಪಟ್ಟಿಗೆ ಸುದ್ದಿ ಅಂತರ್ಜಾಲ ತಾಣಗಳ ಸೇರ್ಪಡೆ?
140 ವರ್ಷಗಳ ಹಿಂದಿನ ಪತ್ರಿಕೆ ಮತ್ತು ನೊಂದಣಿ ಕಾಯಿದೆಗೆ ಸರಕಾರ ತಿದ್ದುಪಡಿ ತರುವುದಕ್ಕೆ ಚಿಂತನೆ ನಡೆಸಿದ್ದು. ಅಂದಿನ ಬ್ರಿಟಿಷ್ ಆಡಳಿತದಲ್ಲಿ ಜಾರಿಗೆ ಬಂದಿರುವ ಪ್ರೆಸ್ ಕಾಯಿದೆಯ ಸಮಗ್ರ ಬದಲಾವಣೆಗೆ ಸರಕಾರ ಮುಂದಾಗಿದೆ. ಸಮಗ್ರವಾಗಿ ಬದಲಾವಣೆಯಾಗಲಿರುವ ಮಸೂದೆಯ ಅನ್ವಯ ಅಂತರ್ಜಾಲ ಸುದ್ದಿ ತಾಣಗಳು, ಮುದ್ರಣ ಮಾದ್ಯಮದ ಅಂತರ್ಜಾಲ ತಾಣಗಳು ಮಾದ್ಯಮ ಪಟ್ಟಿಗೆ ಸೆರ್ಪಡೆಯಾಗಲಿವೆ.

1867ರ ಕಾನೂನಿನ ಅನ್ವಯ ಮಾಧ್ಯಮದ ಪಟ್ಟಿಯಲ್ಲಿ ಮುದ್ರಣ ಮಾದ್ಯಮದ ದಿನಪತ್ರಿಕೆ, ವಾರಪತ್ರಿಕೆಗಳು ಮಾತ್ರ ಸೆರ್ಪಡೆಯಾಗಿದ್ದವು. ಅಂತರ್ಜಾಲ ಸುದ್ದಿ ಮಾದ್ಯಮ ಪತ್ರಿಕಾ ನೀತಿ ಸಂಹಿತೆ ಮತ್ತು ಸೌಲಭ್ಯಗಳಿಂದ ವಂಚಿತವಾಗಿತ್ತು.

ಇಂದು ಮುದ್ರಣ ಎನ್ನುವ ಪದ ವ್ಯಾಖ್ಯೆ ಬದಲಾಗಿದ್ದು. ಮುದ್ರಣ ಶಬ್ದ ಕೇವಲ ಕಾಗದದ ಮೇಲಿನ ಮುದ್ರಣಕ್ಕೆ ಸಿಮಿತವಾಗಿಲ್ಲ. ಕಂಪ್ಯೂಟರ್ ಪರದೆ ಕೂಡ ಇಂದು ಮುದ್ರಣಕ್ಕೆ ಸಮನಾದ ಅರ್ಥವನ್ನು ಪಡೆದಿದೆ. ದೂರಸಂಪರ್ಕದಲ್ಲಿ ಆಗಿರುವ ಕ್ರಾಂತಿಯಿಂದ ದೂರದ ಸ್ಥಳಗಳಲ್ಲಿ ಮತ್ತು ಏಕಕಾಲಕ್ಕೆ ಹಲವು ಸ್ಥಳಗಳಲ್ಲಿ ಪತ್ರಿಕೆಯನ್ನು ಮುದ್ರಣ ಮಾಡಬಹುದಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಧಿಕಾರಿಯೊಬ್ಬರು ಸರಕಾರದ ಉದ್ದೇಶಿತ ತಿದ್ದುಪಡಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್ ಮಾದ್ಯಮವನ್ನು ನಿಯಂತ್ರಣಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಸರಕಾರ ತಿದ್ದುಪಡಿಗೆ ಮುಂದಾಗುತ್ತಿದೆ ಎಂಬ ವದಂತಿಯನ್ನು ಅಲ್ಲಗಳೆದ ಅವರು. ತಂತ್ರಜ್ಞಾನ ಬದಲಾದಂತೆ ಶತಮಾನಗಳ ಹಿಂದಿನ ಕಾನೂನು ಬದಲಾಗಿಲ್ಲ ಮತ್ತು ಅದರಂತೆ ಮಾದ್ಯಮಗಳ ಆಡಳಿತ ಮತ್ತು ಮಾಲಿಕತ್ವದಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿವೆ.

ಜಾರಿಯಲ್ಲಿರುವ ಕಾನೂನು ಕೇವಲ ನಿಯಂತ್ರಣಕ್ಕೆ ಮಾತ್ರ ಸಿಮಿತವಾಗಿದ್ದು. ಮುಂಬರುವ ದಿನಗಳಲ್ಲಿ ಜಾರಿಯಾಗಲಿರುವ ಕಾನೂನು ಮುದ್ರಣ ಮತ್ತು ಇತರ ಎಲ್ಲ ಮಾದ್ಯಮಗಳ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.
ಮತ್ತಷ್ಟು
ರೈಲಿನಲ್ಲಿ ಬಾಯ್ಲರ್ ಸ್ಫೋಟದ ತನಿಖೆ
ರೈಲುಗಳಲ್ಲಿ ಎಟಿಎಂ ಸೌಲಭ್ಯ
ನ್ಯಾಯಾಲಯ ನಿಂದನೆಗೆ ಕ್ರಮಕ್ಕೆ ಆಗ್ರಹ
ಹೆಣ್ಣುಮಕ್ಕಳ ಅನುಪಾತ ಕುಸಿತ
ಕರುಣಾ ವಿರುದ್ಧ ಹೇಳಿಕೆಗೆ ಬದ್ಧ
ಸುನಿತಾಗೆ ಸಮೋಸಾ ಖಾದ್ಯ