ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಿದುಳು ಬೇನೆಯ 100 ಮಕ್ಕಳಿಗೆ ಶಸ್ತ್ರಚಿಕಿತ್ಸೆ
ತಿರುನಲ್ವೇಲಿ ವೈದ್ಯ ಕಾಲೇಜಿನ ಆರ್ಥೋಪೀಡಿಕ್ಸ್ ವಿಭಾಗವು ಅ.8ರಿಂದ ಸೆರೆಬ್ರಲ್ ಪಾಲ್ಸಿ(ಮಿದುಳುಬೇನೆ)ಗೆ ಒಳಗಾದ 100 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಕೈಗೊಳ್ಳಲಿದೆ. ವನ್ನಾರ್‌ಪೇಟೆಯ ಫ್ರಾನ್ಸಿಸ್ ಕ್ಸೇವಿಯರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆಯುವ ವಿಶೇಷ ಶಿಬಿರದಲ್ಲಿ ವೈದ್ಯರ ತಂಡ ಮಕ್ಕಳ ಪರೀಕ್ಷೆ ಮಾಡಲಿದೆ ಎಂದು ಆರ್ಥೋಪೀಡಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಎಸ್. ರಾಮಗುರು ತಿಳಿಸಿದರು.

ವಿಶೇಷ ಶಿಬಿರದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ 2000 ಮಕ್ಕಳನ್ನು ನಾವು ನಿರೀಕ್ಷಿಸಿದ್ದೇವೆ. ಶಸ್ತ್ರಚಿಕಿತ್ಸೆ ಅಗತ್ಯವಾದ ಮಕ್ಕಳನ್ನು ವೈದ್ಯರ ತಂಡ ಪರಿಶೀಲನೆ ನಡೆಸಲಿದೆ ಎಂದು ಅವರು ನುಡಿದರು.

ವೈದ್ಯ ವಿದ್ಯಾರ್ಥಿಗಳಲ್ಲಿ, ಸರ್ಕಾರೇತರ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮಿದುಳು ಬೇನೆಯ ಬಗ್ಗೆ ಜಾಗೃತಿ ಮೂಡಿಸಲು "ಮಿದುಳುಬೇನೆ ನಿರ್ವಹಣೆಯ ಪ್ರಸಕ್ತ ಪರಿಕಲ್ಪನೆ" ಮತ್ತು ಮಿದುಳುಬೇನೆಯ ದೋಷಗಳನ್ನು ಸರಿಪಡಿಸುವ ಹೊಸ ತಂತ್ರಗಳನ್ನು ಕುರಿತ ಕಾರ್ಯಾಗಾರವನ್ನು ವೈದ್ಯ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.

ಸುಮಾರು 1500 ವೈದ್ಯ ವಿದ್ಯಾರ್ಥಿಗಳು, ಎನ್‌ಜಿಒಗಳು ಮತ್ತು ವೈದ್ಯ ಸಿಬ್ಬಂದಿ ಸಿಎಂಇ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಲಿದೆ. ಸೆರೆಬ್ರಲ್ ಪಾಲ್ಸಿ ಜನನಕ್ಕೆ ಮುಂಚೆ ಅಥವಾ ಜನನದ ಬಳಿಕ ಉಂಟಾಗುವ ಕಾಯಂ ಮೆದುಳು ಹಾನಿಯಾಗಿದ್ದು, ಸ್ನಾಯು ನಿಯಂತ್ರಣ ಮತ್ತು ಚಲನವಲನಕ್ಕೆ ಕೊರತೆ ಉಂಟಾಗುತ್ತದೆ ಎಂದು ರಾಮಗುರು ಹೇಳಿದರು.

ಸೆರೆಬ್ರಲ್ ಪಾಲ್ಸಿಗೆ ಖಚಿತ ಕಾರಣ ತಿಳಿದಿರದಿದ್ದರೂ, ತಾಯಿ, ಮಗುವಿನ ಆರೋಗ್ಯ ಹಿನ್ನೆಲೆ ಮತ್ತು ಅಪಘಾತಗಳಿಂದ ಮೆದುಳಿಗೆ ಹಾನಿ ತಟ್ಟುತ್ತದೆ ಎಂದು ಹೇಳಿದೆ. ಕಲಿಯುವಿಕೆ ದೋಷಗಳು,ಮೂರ್ಛೆ ರೋಗ, ದೃಷ್ಟಿ ಮತ್ತು ಶ್ರವಣ ದೋಷಗಳು ಮೆದುಳು ಹಾನಿಯ ಲಕ್ಷಣಗಳು.
ಮತ್ತಷ್ಟು
ಮಾಧ್ಯಮ ಪಟ್ಟಿಗೆ ಸುದ್ದಿ ಅಂತರ್ಜಾಲ ತಾಣಗಳ ಸೇರ್ಪಡೆ?
ರೈಲಿನಲ್ಲಿ ಬಾಯ್ಲರ್ ಸ್ಫೋಟದ ತನಿಖೆ
ರೈಲುಗಳಲ್ಲಿ ಎಟಿಎಂ ಸೌಲಭ್ಯ
ನ್ಯಾಯಾಲಯ ನಿಂದನೆಗೆ ಕ್ರಮಕ್ಕೆ ಆಗ್ರಹ
ಹೆಣ್ಣುಮಕ್ಕಳ ಅನುಪಾತ ಕುಸಿತ
ಕರುಣಾ ವಿರುದ್ಧ ಹೇಳಿಕೆಗೆ ಬದ್ಧ