ಭಾರತದ ದೇಶೀಯ ನಿರ್ಮಿತ ಅಗ್ನಿ ಸರಣಿಯ ಖಂಡಾಂತರ ಅಗ್ನಿ-1 ಕ್ಷಿಪಣಿಯನ್ನು ಒರಿಸ್ಸಾ ತೀರದ ವೀಲರ್ಸ್ ದ್ವೀಪದಿಂದ ಯಶಸ್ವಿಯಾಗಿ ಹಾರಿಸಲಾಯಿತು. 1000 ಕೇಜಿ ಅಣ್ವಸ್ತ್ರ ಸಿಡಿತಲೆ ಒಯ್ಯುವ ಸಾಮರ್ಥ್ಯದ, 12 ಟನ್ ತೂಕದ ಈ ಕ್ಷಿಪಣಿಯನ್ನು ಮೊಬೈಲ್ ಲಾಂಚರ್‌ನಿಂದ ಬಂಗಾಳಕೊಲ್ಲಿಯಲ್ಲಿ ಬೆಳಿಗ್ಗೆ 10.30ಕ್ಕೆ ಹಾರಿಸಲಾಯಿತು ಎಂದು ಮೂಲಗಳು ಹೇಳಿವೆ.
ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ದೃಢಪಡಿಸಿದ ಮೂಲಗಳು, ಅಗ್ನಿ -1 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ 2002 ,ಜ.25ರಂದು ನಡೆದಾಗಿನಿಂದ ಪುನರ್‌ಪ್ರವೇಶ ತಂತ್ರಜ್ಞಾನದಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ನೆಲದಲ್ಲಿರುವ ರೆಡಾರ್‌ಗಳ ಜಾಲ, ಟೆಲಿಮಿಟ್ರಿ ನಿಲ್ದಾಣಗಳಿಂದ ಸಿಗುವ ಅಂಕಿಅಂಶಗಳ ಆಧಾರದ ಮೇಲೆ ಪರೀಕ್ಷಾರ್ಥ ಪ್ರಯೋಗವನ್ನು ಅಧ್ಯಯನ ಮತ್ತು ವಿಶ್ಲೇಷಣೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
|