ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ
ಜಲಗರ್ಭದಲ್ಲಿ ಸಂಭವಿಸಿದ ಬೀಕರ ಭೂಕಂಪದಿಂದ ಹುಟ್ಟಿದ ಹಂತಕ ಅಲೆಗಳು ಭಾರತದ ದಕ್ಷಿಣ ತೀರಪ್ರದೇಶದಲ್ಲಿ ಹಾವಳಿ ಎಬ್ಬಿಸಿ ಮೂರು ವರ್ಷಗಳು ಕಳೆದ ಬಳಿಕ ಭಾರತ ಸ್ವತಃ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ರಾಷ್ಟ್ರೀಯ ಸುನಾಮಿ ಮತ್ತು ಬಿರುಗಾಳಿ ಮುನ್ಸೂಚನೆ ವ್ಯವಸ್ಥೆಯು ಸಾಗರ ಮಾಹಿತಿ ಸೇವೆಯ ರಾಷ್ಟ್ರೀಯ ಕೇಂದ್ರದಲ್ಲಿ ರೂಪ ತಳೆದಿದೆ.

ವಿಜ್ಞಾನಿಗಳು ಕಳೆದ ವಾರ ಸುನಾಮಿ ಲಕ್ಷಣಗಳನ್ನು ಗುರುತಿಸುವ ಎರಡು ಕೆಳ ಒತ್ತಡ ರೆಕಾರ್ಡರ್‌ಗಳನ್ನು ಮತ್ತು ಸೆನ್ಸರ್‌ಗಳನ್ನು ಅರಬ್ಬಿ ಸಮುದ್ರದ ಗುಜರಾತ್ ಕರಾವಳಿಯಲ್ಲಿ ಅಳವಡಿಸಿತು.

ಬಂಗಾಳ ಕೊಲ್ಲಿಯಲ್ಲಿ ನಾಲ್ಕು ಬಿಪಿಆರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ದಕ್ಷಿಣ ಸುಮಾತ್ರದಲ್ಲಿ ಭಾರಿ ಜಲಗರ್ಭ ಭೂಕಂಪ ಸಂಭವಿಸಿದಾಗ ಅವನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ಭೂಕಂಪದ ಪ್ರಮಾಣ, ಸ್ಥಳ ಮತ್ತು ಆಳದ ಬಗ್ಗೆ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸಿ ಸೂಕ್ತ ಸನ್ನಿವೇಶವನ್ನು ಗಮನಿಸಿ ಸುನಾಮಿ ಅಲೆಗಳ ಸಾದ್ಯತೆ ಬಗ್ಗೆ ತಿಳಿಸುತ್ತದೆ. ನಾವು 30 ನಿಮಿಷಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲು ಸಾಧ್ಯವಾಗುತ್ತದೆ ಎಂದು ಸಾಗರ ಮಾಹಿತಿ ಕೇಂದ್ರದ ನಿರ್ಧೇಶಕ ಶೈಲೇಶ್ ನಾಯಕ್ ತಿಳಿಸಿದರು.
ಮತ್ತಷ್ಟು
ಮನೋರೋಗಿಯಿಂದ ಐವರ ಹತ್ಯೆ
ಬೆಂಬಲ ಹಿಂದೆಗೆತ:ಎಡಪಕ್ಷಗಳ ಬೆದರಿಕೆ
ಅಗ್ನಿ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಟೈಟ್ಲರ್‌ಗೆ ಕ್ಲೀನ್ ಚಿಟ್: ಸಿಬಿಐಗೆ ಕೋರ್ಟ್ ನೋಟಿಸ್
ಮಿದುಳು ಬೇನೆಯ 100 ಮಕ್ಕಳಿಗೆ ಶಸ್ತ್ರಚಿಕಿತ್ಸೆ
ಮಾಧ್ಯಮ ಪಟ್ಟಿಗೆ ಸುದ್ದಿ ಅಂತರ್ಜಾಲ ತಾಣಗಳ ಸೇರ್ಪಡೆ?