ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್ ಅವರು ಆಯೋಜಿಸಿದ್ದ ಇಪ್ತಾರ ಕೂಟಕ್ಕೆ ಆಗಮಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಅಮೆರಿಕ ಮತ್ತು ಭಾರತ ನಡುವಿನ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು, ಲೋಕಸಭೆಯ ಮದ್ಯಂತರ ಚುನಾವಣೆಯನ್ನು ತಂದೊಡ್ಡಿದಲ್ಲಿ ಕಾಂಗ್ರೆಸ್ ಕೂಡ ಚುನಾವಣೆಗೆ ಸಿದ್ದವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಪೂರ್ಣವಾಗಿ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳದಿರುವ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು, ಎಡಪಕ್ಷಗಳೊಂದಿಗೆ ಒಪ್ಪಂದದ ಕುರಿತಂತೆ ಸಾಗುತ್ತಿರುವ ಮಾತುಕತೆಗಳ ಕುರಿತು ಮಾಹಿತಿ ನೀಡಲು ನಿರಾಕರಿಸಿ, ಚುನಾವಣೆಯ ಸಾಧ್ಯತೆಯ ಬಗ್ಗೆ ಅವರು ನಾನು ಜ್ಯೋತಿಷಿ ಅಲ್ಲ ಎಂದು ಹೇಳಿದ್ದಾರೆ.
ಎಡಪಕ್ಷದೊಂದಿಗೆ ನಡೆಯುತ್ತಿರುವ ಮಾತುಕತೆಯ ಫಲಪ್ರದವಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದು, ಇಪ್ತಾರ್ ಪಾರ್ಟಿಯಲ್ಲಿ ಸಿತಾರಾಮ್ ಯೆಚೂರಿ ಮುಂತಾದ ಕೆಲವೇ ಎಡಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಅಣ್ವಸ್ತ್ರ ಮತ್ತು ವಿದೇಶಾಂಗ ನೀತಿಯಲ್ಲಿ ಭಾರತದ ಹಿತಾಸಕ್ತಿಯನ್ನು ಖಾತ್ರಿಪಡಿಸಿಕೊಂಡ ನಂತರವೇ ಅಣು ಒಪ್ಪಂದದ ಜಾರಿಯಾಗಬೇಕು ಎಂದು ಎಡಪಕ್ಷಗಳು ತಳೆದಿರುವ ನಿಲುವನ್ನು ಸ್ಪಷ್ಟಪಡಿಸಿದರು.
|