ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಡಪಕ್ಷ ಅಭಿವೃದ್ದಿ ವಿರೋಧಿ, ಶತ್ರು: ಸೋನಿಯಾ
ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ,ದೇಶದ ಅಭಿವೃದ್ಧಿಯನ್ನು ವಿರೋಧಿಸುವ ಶಕ್ತಿಗಳು ಕಾಂಗ್ರೆಸ್ಸಿನ ಶತ್ರುಗಳು ಮಾತ್ರವಲ್ಲ,ದೇಶದ ಪ್ರಗತಿಯ ಶತ್ರುಗಳು ಕೂಡ ಆಗಿರುವರೆಂದು ಎಡಪಕ್ಷಗಳನ್ನು ಉದ್ದೇಶಿಸಿ ಕಟುವಾಗಿ ಟೀಕಿಸಿದ್ದಾರೆ.

ಅಂತಹ ಶಕ್ತಿಗಳು ಕಾಂಗ್ರೆಸಿನ ಶತ್ರುಗಳು ಮಾತ್ರವೇ ಅಲ್ಲ,ಅಭಿವೃದ್ಧಿಯ ಶತ್ರುಗಳು ಕೂಡ ಆಗಿರುವರೆಂದು ನಾವು ಅರಿತುಕೊಳ್ಳಬೇಕು.ನಾವು ಅವಪರಿಗೆ ತೀಕ್ಷ್ಣ ಮತ್ತು ತಕ್ಕ ಉತ್ತರ ನೀಡಬೇಕು ಎಂದವರು ಹರಿಯಾಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.

ಪರಮಾಣು ಒಪ್ಪಂದವನ್ನು ಈ ಹಿಂದೆಯೂ ಅವರು ಸಮರ್ಥಿಸಿಕೊಂಡಿದ್ದರೂ,ಅದನ್ನು ವಿರೋಧಿಸುವವರನ್ನು ಟೀಕಿಸುವುದರಿಂದ ಅವರು ಇದುವರೆಗೆ ದೂರುವುಳಿದಿದ್ದರು.ಒಪ್ಪಂದ ಕುರಿತಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಣ ಬಿಕ್ಕಟ್ಟು ಉಲ್ಭಣಗೊಂಡಿದೆ ಎಂಬುದನ್ನು ಮನಗಂಡ ಸೋನಿಯಾ ಅವರು ಎಡಪಕ್ಷ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿದ್ಯುತ್ ಪೂರೈಕೆ ಅಭಿವೃದ್ಧಿಗೆ ತಕ್ಕಂತೆ ವೃದ್ಧಿಗೊಳ್ಳಬೇಕು.ದೇಶದ ಪ್ರತಿಯೊಂದು ಭಾಗದಲ್ಲಿ ಕೂಡ ವಿದ್ಯುತ್‌ಗೆ ಹೆಚ್ಚು ಬೇಡಿಕೆ ಇದೆ.ನಮ್ಮ ಇಂಧನ ಅವಶ್ಯಕತೆಗಳನ್ನು ಈಡೇರಿಸಲು ಪ್ರತಿಯೊಂದು ಹಂತದಲ್ಲಿಯೂ ನಾವು ಪ್ರಯತ್ನಿಸುತ್ತಿದ್ದೇವೆ.ಹೀಗಾಗಿ ಅಮೆರಿಕದ ಜತೆ ಪರಮಾಣು ಒಪ್ಪಂದದ ಪ್ರಸ್ತಾಪವಿದೆ ಎಂದು ಸೋನಿಯಾ ಹೇಳಿದರು.
ಮತ್ತಷ್ಟು
ಪರಿಸ್ಥಿತಿ ಬಂದರೆ ಚುನಾವಣೆಗೆ ಸಿದ್ದ: ಸೋನಿಯಾ
ಜೆಡಿಎಸ್‌ಗೆ ಬೆಂಬಲ ವಾಪಸ್: ಸಿನ್ಹಾ
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ
ಮನೋರೋಗಿಯಿಂದ ಐವರ ಹತ್ಯೆ
ಬೆಂಬಲ ಹಿಂದೆಗೆತ:ಎಡಪಕ್ಷಗಳ ಬೆದರಿಕೆ