ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗೌಡರ ಹೇಳಿಕೆ ವಿರುದ್ದ ಸಿನ್ಹಾ ಅಕ್ರೋಶ
ಕರ್ನಾಟಕವನ್ನು, ಭಾರತೀಯ ಜನತಾ ಪಕ್ಷ ಹಿಂದುತ್ವದ ಪ್ರಯೋಗಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿತ್ತು ಎನ್ನುವ ಮಾಜಿ ಪ್ರಧಾನಿ ದೇವೆಗೌಡ ಅವರ ಹೇಳಿಕೆಯುನ್ನು ಅಸಹ್ಯಕರ ಎಂದು ಬಿಜೆಪಿ ಉಪಾದ್ಯಕ್ಷ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಜೆಡಿಎಸ್ ಎಸಗಿರುವ ದ್ರೋಹವನ್ನು ಸಮರ್ಥಿಸಿಕೊಳ್ಳುವ ದೃಷ್ಟಿಯಿಂದ ಈ ರೀತಿಯ ಅಪದ್ಧ ಹೇಳಿಕೆಗಳನ್ನು ದೇವೆಗೌಡ ನೀಡುತ್ತಿದ್ದಾರೆ. ಅಧಿಕಾರ ಹಸ್ತಾಂತರದ ಒಪ್ಪಂದವನ್ನು ಪಾಲಿಸದೇ ದ್ರೋಹ ಎಸಗಿದ್ದು ಜೆಡಿಎಸ್ ಎಂದು ಅವರು ಆಪಾದಿಸಿದ್ದಾರೆ.

ಕಳೆದ ಇಪ್ಪತ್ತು ತಿಂಗಳು ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ದೇವೆಗೌಡ ಈ ರೀತಿಯ ಹೇಳಿಕೆ ಏಕೆ ನೀಡಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಈಗ ಎದ್ದಿರುವ ರಾಜಕೀಯ ಬಿಕ್ಕಟ್ಟಿಗೆ ಚುನಾವಣೆ ಒಂದೇ ಪರಿಹಾರ. ಮದ್ಯಂತರ ಚುನಾವಣೆಗೆ ಬಿಜೆಪಿ ಕಾರಣ ಅಲ್ಲ. ಅಕ್ಟೋಬರ್ 3ರಂದು ಜೆಡಿಎಸ್ ಅಧಿಕಾರ ಹಸ್ತಾಂತರ ಮಾಡಿದ್ದರೆ ಚುನಾವಣೆಯಾಗಲಿ ರಾಜಕೀಯ ಬಿಕ್ಕಟ್ಟು ಆಗಲಿ ಉದ್ಭವಿಸುತ್ತಿರಲಿಲ್ಲ. ಸಮ್ಮಿಶ್ರ ಸರಕಾರಗಳ ತತ್ವಕ್ಕೆ ಬಿಜೆಪಿ ಹೊಂದಿಕೊಳ್ಳುತ್ತಿಲ್ಲ ಎನ್ನುವ ಆಪಾದನೆಯನ್ನು ಅಲ್ಲಗಳೆದಿರುವ ಅವರು. ವಾಜಪೆಯಿ ನೇತೃತ್ವದಲ್ಲಿ ಆರು ವರ್ಷಗಳ ಕಾಲ ಸರಕಾರ, ಒರಿಸ್ಸಾ, ಬಿಹಾರ ಮತ್ತು ಪಂಜಾಬ್‌ಗಳಲ್ಲಿ ಭಾರತೀಯ ಜನತಾಪಕ್ಷ, ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿದೆ ಎಂದು ಹೇಳಿದರು.

ಸಮ್ಮಿಶ್ರ ಸರಕಾರ ವಿಫಲವಾಗಬೇಕಾದರೆ ಜೆಡಿಎಸ್ ಪಕ್ಷದಲ್ಲಿ ಈಗ ಕಂಡುಬಂದ ಅಪ್ರಾಮಾಣಿಕತೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಎಡಪಕ್ಷ ಅಭಿವೃದ್ದಿ ವಿರೋಧಿ, ಶತ್ರು: ಸೋನಿಯಾ
ಪರಿಸ್ಥಿತಿ ಬಂದರೆ ಚುನಾವಣೆಗೆ ಸಿದ್ದ: ಸೋನಿಯಾ
ಜೆಡಿಎಸ್‌ಗೆ ಬೆಂಬಲ ವಾಪಸ್: ಸಿನ್ಹಾ
ಕರ್ನಾಟಕ ವಿದ್ಯಮಾನಕ್ಕೆ ಎಡಪಕ್ಷ ಸ್ವಾಗತ
ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ
ಮನೋರೋಗಿಯಿಂದ ಐವರ ಹತ್ಯೆ