ನವದೆಹಲಿಯಲ್ಲಿ ಭಾನುವಾರ ಪಾದಚಾರಿಗಳ ಮೇಲೆ ಬಸ್ ಹರಿದು 7 ಮಂದಿ ಸಾವಪ್ಪಿದ ಘಟನೆಯಿಂದ ಉದ್ರಿಕ್ತರಾದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ನೂರಾರು ಪ್ರತಿಭಟನೆಕಾರರು ಪೊಲೀಸರ ಜತೆ ಕಾದಾಟಕ್ಕಿಳಿದ ದೃಶ್ಯವನ್ನು ಟೆಲಿವಿಷನ್ ಚಾನೆಲ್‌ಗಳು ತೋರಿಸಿದವು.
ಗುಂಪುನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಘು ಲಾಠಿ ಪ್ರಹಾರ ಮಾಡಿದರು. ಪ್ರತಿಭಟನೆಕಾರರು ಬಸ್ ಚಾಲಕನನ್ನು ಕೂಡ ಥಳಿಸಿದ್ದರು.ನಗರದಲ್ಲಿ ಬಸ್ ಸಂಚಾರವನ್ನೇ ನಿಷೇಧಿಸಬೇಕೆಂದು ಒತ್ತಾಯ ಮಾಡುತ್ತಿರುವ ಪತ್ರಿಕೆಗಳು ಜನವರಿಯಿಂದೀಚೆಗೆ 85 ಜನರು ಬ್ಲೂಲೈನ್ ಬಸ್ ಅಪಘಾತಗಳಿಗೆ ಸಿಲುಕಿ ಸತ್ತಿದ್ದಾರೆಂದು ಹೇಳಿವೆ.
ಖಾಸಗಿಯಾಗಿ ನಿರ್ವಹಿಸಲಾಗುತ್ತಿರುವ ಬ್ಲೂಲೈನ್ ಬಸ್‌ಗಳು ನವದೆಹಲಿಯ ರಸ್ತೆಗಳಲ್ಲಿ ವಾಹನಗಳ ನಡುವೆ ಅಡ್ಡಾದಿಡ್ಡಿಯಾಗಿ, ತಿರುವುಗಳಲ್ಲಿ ಕೂಡ ವೇಗವಾಗಿ ಚಲಿಸುತ್ತಾ, ಪೈಪೋಟಿಯಲ್ಲಿ ಬಸ್ ಓಡಿಸುತ್ತಿವೆಯೆಂದು ಹೇಳಲಾಗಿದೆ.
|