ಬ್ಲೂಲೈನ್ ಬಸ್ ಚಾಲಕರ ಅತೀವೇಗದ ಚಾಲನೆಯ ಇನ್ನೊಂದು ಪ್ರಕರಣ ವರದಿಯಾಗಿದ್ದು, ಮೋಟರ್‌ಬೈಕ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ನೊಯ್ಡಾದಲ್ಲಿ ಬ್ಲೂಲೈನ್ ಬಸ್‌ಗೆ ಸಿಕ್ಕಿ ಸತ್ತಿದ್ದಾನೆ.
ಉದ್ರಿಕ್ತ ಗುಂಪು ಬಸ್ಸಿಗೆ ಬೆಂರಿ ಹಚ್ಚಿತು. ಏತನ್ಮಧ್ಯೆ, ಈ ಬಸ್ಸುಗಳನ್ನು ಹಂತಹಂತವಾಗಿ ನಿಲ್ಲಿಸಲು ಮಾಗದರ್ಶಕಗಳನ್ನು ಸಿದ್ಧಪಡಿಸುವಂತೆ ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಬ್ಲೂಲೈನ್ ಬಸ್ ಅಪಘಾತದಿಂದ ಭಾನುವಾರ 7 ಮಂದಿ ಸಾವಪ್ಪಿದ ಬಳಿಕ ದೆಹಲಿ ಸರ್ಕಾರದ ಉದಾಸೀನದ ಪ್ರತಿಕ್ರಿಯೆಯಿಂದ ಕೆರಳಿದ ನ್ಯಾಯಾಂಗ ಮಧ್ಯಪ್ರವೇಶಿಸಿ ಒಂದು ತಿಂಗಳಲ್ಲಿ ನೀತಿಯೊಂದನ್ನು ರೂಪಿಸುವ ಬಗ್ಗೆ 2 ದಿನಗಳ ಗಡುವನ್ನು ವಿಧಿಸಿದೆ.
ಸರ್ಕಾರ ಪ್ರತಿಕ್ರಿಯಿಸಲು ವಿಫಲವಾದರೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವುದಾಗಿ ಕೋರ್ಟ್ ಎಚ್ಚರಿಸಿದೆ. ಕೋರ್ಟ್ ಬ್ಲೂಲೈನ್ ಬಸ್‌ಗಳ ಸಂಚಾರಕ್ಕೆ ತಕ್ಷಣವೇ ನಿಷೇಧ ವಿಧಿಸಲಿಲ್ಲ. ಏಕೆಂದರೆ ಪ್ರಯಾಣಿಕರಿಗೆ ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಇರಲಿಲ್ಲ.
|