ಸುಮಾರು 200 ವರ್ಷಗಳಿಂದ ಭೂಮಿಯಡಿಯಲ್ಲಿ ಹೂತಿಡಲಾಗಿದ್ದ ಸುಮಾರು 10,000 ಮೂರ್ತಿಗಳ ಪ್ರಾಚೀನ ಕಲಾಕೃತಿಗಳು ಈಗ ಹವಾಮಾನ ವೈಪರೀತ್ಯದಿಂದ ದುರ್ಬಲವಾಗುತ್ತಿವೆ. ಪೋರ್ಚುಗೀಸರು ಮತ್ತು ಕಳ್ಳಸಾಗಣೆದಾರರ ಕೈಗೆ ಸಿಗದಂತೆ ರಕ್ಷಿಸಲು ಗೋವಾದ ಎರಡು ತಾಲೂಕುಗಳಲ್ಲಿ ಈ ಮೂರ್ತಿಗಳನ್ನು ಹುದುಗಿಡಲಾಗಿತ್ತು.
ಅಮೂಲ್ಯವಾದ ಈ ಕಲಾಕೃತಿಗಳು ಲಕ್ಷಾಂತರ ರೂ ಮೌಲ್ಯವುಳ್ಳದ್ದಾಗಿದ್ದು, ಉತ್ತರಗೋವಾದ ಸತ್ತಾರಿಯ ವಿವಿಧ ಕಡೆ ಮತ್ತು ದಕ್ಷಿಣ ಗೋವಾದ ಸಂಗಮ್‌ನಲ್ಲಿ ಪೋರ್ಚುಗೀಸ್ ಆಡಳಿತಗಾರರಿಂದ ರಕ್ಷಿಸಲು ನೆಲದಡಿಯಲ್ಲಿ ಹುದುಗಿಡಲಾಗಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮೂರ್ತಿಗಳು ಲಕ್ಷಾಂತರ ರೂ. ಬೆಲೆಬಾಳುತ್ತವೆ ಎಂದು ಪುರಾತತ್ವ ತಜ್ಞ ರಾಜೇಂದ್ರ ಕರ್ಕರ್ ತಿಳಿಸಿದರು. ವಿವಿಧ ದೇವಸ್ಥಾನಗಳಲ್ಲಿ ಪೂಜಿಸಲ್ಪಡುತ್ತಿದ್ದ ಈ ಮೂರ್ತಿಗಳು ಈ ತಾಲೂಕುಗಳಲಿ ಪೋರ್ಚುಗೀಸರು ಆಕ್ರಮಣ ಆರಂಭಿಸಿದ ಬಳಿಕ ಮೂರ್ತಿಗಳನ್ನು ಕಿತ್ತು ನೆಲದಲ್ಲಿ ಹುದುಗಿಡುವ ಮೂಲಕ ದಾಳಿಕೋರರು ಕಳ್ಳಸಾಗಣೆ ಮಾಡದಂತೆ ರಕ್ಷಿಸಲಾಗಿತ್ತು.
ಗ್ರಾನೈಟ್ ಕಲ್ಲುಗಳಿಂದ ಕೆತ್ತಲಾದ ಈ ವಿಗ್ರಹಗಳು ಪ್ರಾಚೀನ ಕಲಾಕೃತಿಗಳಾಗಿರುವುದರಿಂದ ಅಧಿಕ ಮೌಲ್ಯವುಳ್ಳದ್ದಾಗಿದೆ.ಸತತ ಮಳೆ ಮತ್ತು ಬಿಸಿಲಿಗೆ ಒಡ್ಡಿದ ಈ ಮೂರ್ತಿಗಳು ಈಗ ಕ್ಷೀಣಿಸುವ ಹಂತಕ್ಕೆ ತಲುಪುತ್ತಿದೆ.
|