ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚುನಾವಣೆ ಕಹಳೆ ಮೊಳಗಿಸಿದ ಮಾಯಾವತಿ
WD
ಹಣ, ಮಾಫಿಯಾ, ಮಾಧ್ಯಮ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಬಿಎಸ್‌ಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ರಾಲಿಯಲ್ಲಿ ವಸ್ತುಶಃ ಚುನಾವಣೆ ಕಹಳೆ ಮೊಳಗಿಸಿದರು.

"ಸಾವಧಾನ್ ರಹೊ, ಆಗೆ ಬಡೋ" ಬೃಹತ್ ರಾಲಿಯಲ್ಲಿ ಮಾತನಾಡುತ್ತಾ, ಯುಪಿಎ-ಎಡಪಕ್ಷಗಳ ನಡುವೆ ಬಿಕ್ಕಟ್ಟಿನಿಂದ ಮತ್ತು ರಾಮಸೇತು ವಿವಾದದಿಂದ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಗೆ ಸಿದ್ಧವಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಪರಮಾಣು ಒಪ್ಪಂದದ ಬಗ್ಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಬಿಕ್ಕಟ್ಟು ಮತ್ತು ರಾಮಸೇತು ಕುರಿತು ಪ್ರಮಾಣಪತ್ರದ ಪ್ರಮಾದದಿಂದ ಮಧ್ಯಂತರ ಚುನಾವಣೆ ಸನ್ನಿಹಿತವಾಗಿದೆ ಎಂದು ಹೇಳಿದ ಮಾಯಾವತಿ ಪ್ರತಿಪಕ್ಷಗಳ ಅಪಪ್ರಚಾರದ ವಿರುದ್ಧ ಎಚ್ಚರಿಕೆಯಿಂದಿರುವಂತೆ ಕಾರ್ಯಕರ್ತರಿಗೆ ತಿಳಿಸಿದರು.

ಪ್ರತಿಪಕ್ಷಗಳು ಹಣ, ಮಾಫಿಯಾ, ಮಾಧ್ಯಮವನ್ನು ಪಕ್ಷದ ವಿರುದ್ಧ ಪ್ರಯೋಗಿಸಬಹುದು. ಆದರೆ ಯಾವುದಕ್ಕೂ ಪ್ರಚೋದಿತರಾಗಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮತ್ತಷ್ಟು
ದಾರಾ ಸಿಂಗ್‌ ಜಾಮೀನಿಗೆ ನಕಾರ
ಪರಮಾಣು ಬಿಕ್ಕಟ್ಟು: ಅ.22ರಂದು ಮರುಚರ್ಚೆ
ನಶಿಸುತ್ತಿರುವ ಪ್ರಾಚೀನ ಕಲಾಕೃತಿಗಳು
ಕರ್ನಾಟಕದ ಪರಿಸ್ಥಿತಿ ಚರ್ಚೆಗೆ ಕಾಂಗ್ರೆಸ್ ಸಭೆ
ಮುಂದುವರಿದ ಬ್ಲೂಲೈನ್ ಹಾವಳಿ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ: ಇಂದು ಸಂಜೆ ನಿರ್ಧಾರ